- ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಶೇ. 76.98ರಷ್ಟು ಮತದಾನ
- ಕಳೆದ ಬಾರಿಗಿಂತ ಶೇ.4.02ರಷ್ಟು ಏರಿಕೆ
ದಾವಣಗೆರೆ, ಮೇ 8 – ಲೋಕಸಭಾ ಚುನಾ ವಣೆಯಲ್ಲಿ ದಾವಣಗೆರೆ ಕ್ಷೇತ್ರದಲ್ಲಿ ಶೇ. 76.98 ರಷ್ಟು ಮತದಾನವಾಗಿದ್ದು, ಈವರೆಗೂ ನಡೆದ ಚುನಾ ವಣೆಗಳಲ್ಲೇ ಗರಿಷ್ಠ ಮತದಾನ ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಧಿಕಾರಿ ಎಂ.ವಿ. ವೆಂಕಟೇಶ್ ತಿಳಿಸಿದ್ದಾರೆ.
ಚುನಾವಣೆಯ ನಂತರ ತೋಳಹುಣಸೆಯಲ್ಲಿ ರುವ ದಾವಣಗೆರೆ ವಿಶ್ವವಿದ್ಯಾಲಯದಲ್ಲಿನ ಸ್ಟ್ರಾಂಗ್ ರೂಂನಲ್ಲಿ ಮತ ಯಂತ್ರಗಳನ್ನು ಭದ್ರವಾಗಿರಿಸಲಾ ಗಿದೆ. ಬರುವ ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ದಾವಣಗೆರೆ ಕ್ಷೇತ್ರದ 30 ಅಭ್ಯರ್ಥಿಗಳ ಭವಿಷ್ಯ ಕೇಂದ್ರ ಹಾಗೂ ರಾಜ್ಯ ಸಶಸ್ತ್ರ ಮೀಸಲು ಪಡೆ ಭದ್ರತೆಯೊಂದಿಗೆ ಸ್ಟ್ರಾಂಗ್ ರೂಂನಲ್ಲಿ ಸುರಕ್ಷಿತವಾಗಿದೆ.
ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಶೇ.72.96ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.76.98ರಷ್ಟು ಮತದಾನವಾಗಿದೆ. ಮತದಾನದಲ್ಲಿ ಈ ಬಾರಿ ಶೇ.4.02ರಷ್ಟು ಏರಿಕೆಯಾಗಿದೆ ಎಂದು ಚುನಾವಣಾ ಅಧಿಕಾರಿಗಳು ನೀಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ.
ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅತಿ ಹೆಚ್ಚಿನ ಶೇ.82.96ರಷ್ಟು ಮತದಾನವಾಗಿದೆ. ದಾವಣಗೆರೆ ದಕ್ಷಿಣದಲ್ಲಿ ಅತಿ ಕಡಿಮೆ ಶೇ.70.12ರಷ್ಟು ಮತದಾನವಾಗಿದೆ.
ದಾವಣಗೆರೆ ಲೋಕಸಭಾ ಕ್ಷೇತ್ರ ಹರಪನಹಳ್ಳಿ ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಕ್ಷೇತ್ರದಲ್ಲಿ ಒಟ್ಟು 1,946 ಮತಗಟ್ಟೆಗಳಿಂದ 8,51,990 ಪುರುಷ, 8,57,117 ಮಹಿಳಾ, 137 ಇತರೆ ಸೇರಿ 17,09,244 ಮತದಾರರಿದ್ದಾರೆ. ಇದರಲ್ಲಿ 6,67,742 ಪುರುಷ, 6,47,964 ಮಹಿಳೆಯರು ಹಾಗೂ 40 ಇತರೆ ಸೇರಿ 13,15,746 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಒಟ್ಟಾರೆ ಶೇ. 76.98 ರಷ್ಟು ಮತದಾನವಾಗಿದೆ.
ಕ್ಷೇತ್ರವಾರು ವಿವರ : ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ 1,00,046 ಪುರುಷ, 98,759 ಮಹಿಳೆ, 10 ಇತರೆ ಸೇರಿ 1,98,815 ಮತದಾರರಿ ದ್ದಾರೆ. ಈ ಪೈಕಿ, 78,865 ಪುರುಷ, 74,956 ಮಹಿಳೆ, 3 ಇತರೆ ಸೇರಿ 1,53,824 ಜನರು ಮತ ದಾನ ಮಾಡಿದ್ದು ಶೇ. 77.37 ಮತದಾನವಾಗಿದೆ.
ಹರಪನಹಳ್ಳಿಯಲ್ಲಿ 1,12,969 ಪುರುಷ, 1,10,985 ಮಹಿಳೆ, 19 ಇತರೆ ಸೇರಿ 2,23,973 ಮತದಾರರಲ್ಲಿ 88,443 ಪುರುಷ, 84,101 ಮಹಿಳೆ, 3 ಇತರೆ ಸೇರಿ 1,72,547 ಜನರು ಮತ ಚಲಾಯಿಸಿದ್ದಾರೆ. ಶೇ 77.04 ರಷ್ಟು ಮತದಾನ ಮಾಡಲಾಗಿದೆ.
ಹರಿಹರದಲ್ಲಿ 1,05,510 ಪುರುಷ, 1,06, 870 ಮಹಿಳೆ, 17 ಇತರೆ ಸೇರಿ 2,12,397 ಮತ ದಾರರಲ್ಲಿ 85,515 ಪುರುಷ, 83,116 ಮಹಿಳೆ, 7 ಇತರೆ ಸೇರಿ 1,68,638 ಜನರು ಮತದಾನ ಮಾಡಿದ್ದು ಶೇ 79.40 ರಷ್ಟು ಮತದಾನವಾಗಿದೆ.
ದಾವಣಗೆರೆ ಉತ್ತರ 1,24,485 ಪುರುಷ, 1,28,635 ಮಹಿಳೆ, 36 ಇತರೆ ಸೇರಿ 2,53,156 ಮತದಾರರಿದ್ದಾರೆ. 88,445 ಪುರುಷ, 89,773 ಮಹಿಳಾ, 12 ಇತರೆ ಸೇರಿ 1,78,230 ಜನರು ಮತದಾನ ಮಾಡಿದ್ದು ಶೇ 70.40 ರಷ್ಟು ಮತದಾನವಾಗಿದೆ.
ದಾವಣಗೆರೆ ದಕ್ಷಿಣದಲ್ಲಿ 1,09,184 ಪುರುಷ, 1,11,774 ಮಹಿಳಾ, 39 ಇತರೆ ಸೇರಿ 2,20,997 ಮತದಾರರಿದ್ದಾರೆ. 77,854 ಪುರುಷ, 77,105 ಮಹಿಳಾ ಹಾಗೂ 8 ಇತರೆ ಸೇರಿ 1,54,967 ಜನರು ಮತದಾನ ಮಾಡಿದ್ದು, ಶೇ 70.12 ರಷ್ಟು ಮತದಾನವಾಗಿದೆ.
ಮಾಯಕೊಂಡದಲ್ಲಿ 97,759 ಪುರುಷ, 97,326 ಮಹಿಳೆ, 4 ಇತರೆ ಸೇರಿ 1,95,089 ಮತದಾರರಿದ್ದಾರೆ. 82,568 ಪುರುಷ, 79,276 ಮಹಿಳಾ, 2 ಇತರೆ ಸೇರಿ 1,61,846 ಜನರು ಮತದಾನ ಮಾಡಿದ್ದು, ಶೇ 82.96 ರಷ್ಟು ಮತದಾನವಾಗಿದೆ.
ಚನ್ನಗಿರಿಯಲ್ಲಿ 1,01,653 ಪುರುಷ, 1,02,208 ಮಹಿಳೆ, 9 ಇತರೆ ಸೇರಿ 2,03,870 ಮತದಾರರಿದ್ದಾರೆ. 82,491 ಪುರುಷ, 78,670 ಮಹಿಳಾ, 4 ಇತರೆ ಸೇರಿ 1,61,165 ಜನರು ಮತದಾನ ಮಾಡಿದ್ದು ಶೇ. 79.05 ರಷ್ಟು ಮತದಾನವಾಗಿದೆ.
ಹೊನ್ನಾಳಿಯಲ್ಲಿ 1,00,384 ಪುರುಷ, 1,00,560 ಮಹಿಳೆ, 3 ಇತರೆ ಸೇರಿ 2,00,947 ಮತದಾರರಿದ್ದಾರೆ. 83,561 ಪುರುಷ, 80,967 ಮಹಿಳಾ, 1 ಇತರೆ ಸೇರಿ 1,64,529 ಜನರು ಮತದಾನ ಮಾಡಿದ್ದು ಶೇ. 81.88 ರಷ್ಟು ಮತದಾನವಾಗಿದೆ.