ಮಲೇಬೆನ್ನೂರು, ಮೇ 8- ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನ ಗೆಲುವಿ ಗಾಗಿ ಕಾಂಗ್ರೆಸ್ ಪಕ್ಷದ ಮುಖಂ ಡರು, ಕಾರ್ಯಕರ್ತರು, ಅಭಿ ಮಾನಿಗಳು ನಮ್ಮ ನಿರೀಕ್ಷೆಗೂ ಮೀರಿ ಕೆಲಸ ಮಾಡಿದ್ದು, ಅವರಿಗೆ ನಾನು ಚಿರಋಣಿಯಾಗಿ ದ್ದೇನೆಂದು ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಅವರು, ಮಂಗಳವಾರ ಜಿಗಳಿ ಗ್ರಾಮಕ್ಕೆ ಆಗಮಿಸಿ, ಲೋಕಸಭಾ ಚುನಾವಣೆಯಲ್ಲಿ ಮತದಾನ ಆಗುತ್ತಿರುವ ಬಗ್ಗೆ ಪಕ್ಷದ ಮುಖಂಡರು, ಕಾರ್ಯಕರ್ತರಿಂದ ಮಾಹಿತಿ ಪಡೆದುಕೊಂಡ ಸಂದರ್ಭದಲ್ಲಿ ಮಾತನಾಡಿದರು.
ಚುನಾವಣೆಯಲ್ಲಿ ಕ್ಷೇತ್ರದ ಜನ ನನ್ನ ಹಾಗೂ ನಮ್ಮ ರಾಜ್ಯ ಸರ್ಕಾರದ ಮೇಲೆ ಭರವಸೆ ಇಟ್ಟು ಮತದಾನ ಮಾಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ಉತ್ಸಾಹ, ಆಸಕ್ತಿ ನಮಗೂ ಇದೆ. ಈ ಚುನಾವಣೆಯಲ್ಲಿ ಗೆಲುವಿನ ಸಂಪೂರ್ಣ ವಿಶ್ವಾಸವನ್ನು ಕ್ಷೇತ್ರದ ಜನ ನನಗೆ ಕೊಟ್ಟಿದ್ದಾರೆ ಎಂದು ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಗೆಲುವಿನ ನಗೆ ಬೀರಿದರು.
ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿ.ಆನಂದಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಡಿ.ಹೆಚ್.ಮಂಜುನಾಥ್, ಬಿ.ಎಂ.ದೇವೇಂದ್ರಪ್ಪ, ಗ್ರಾ.ಪಂ. ಸದಸ್ಯರಾದ ಡಿ.ಎಂ.ಹರೀಶ್, ಕೆ.ಜಿ.ಬಸವರಾಜ್, ಪೂಜಾರ್, ನಾಗರಾಜ್, ಮಾಕನೂರು ಶಿವು, ಬಿ.ಸೋಮಶೇಖರಚಾರಿ, ನಾಗಸನಹಳ್ಳಿ ಮಹೇಶ್ವರಪ್ಪ, ಭೋವಿ ಮಂಜಪ್ಪ, ಕೆ.ಎಸ್.ನಂದ್ಯಪ್ಪ, ಕೆ.ಎಂ.ರಾಮಪ್ಪ, ಮಾಸಡಿ ಕರಿಯಪ್ಪ, ಮಾಸಡಿ ಕೆಂಚಪ್ಪ, ಬೆಣ್ಣೇರ ನಂದ್ಯಪ್ಪ, ಎಂ.ನಿಂಗಪ್ಪ, ಮಾಸಡಿ ಬಸವರಾಜ್, ನಾಗರಸನಹಳ್ಳಿ ಬಸವರಾಜ್, ಡಿ.ಮಂಜುನಾಥ್, ಎ.ಕೆ.ರವಿ ಮತ್ತು ಕುಂಬಳೂರು ವಾಸು ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು.
ನಂತರ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಕುಂಬಳೂರು, ಮಲೇಬೆನ್ನೂರು, ಕೊಮಾರನಹಳ್ಳಿ ಗ್ರಾಮಗಳಿಗೆ ತೆರಳಿ ಮತದಾನದ ಬಗ್ಗೆ ಮಾಹಿತಿ ಪಡೆದುಕೊಂಡರು.