ಹರಿಹರ ತಾಲ್ಲೂಕಿನ ಗಂಗನರಸಿ ಗ್ರಾಮದ ಶ್ರೀ ಗೋಣಿ ಬಸವೇಶ್ವರ ಹೊರ ಮಠದಲ್ಲಿ ಅಕ್ಷಯ ತದಿಗೆ ಅಮಾವಾಸ್ಯೆಯ ವಿಶೇಷ ಪೂಜಾ ಕಾರ್ಯಕ್ರಮಗಳು ಇಂದು ಬೆಳಿಗ್ಗೆ 11ಕ್ಕೆ ನಡೆಯಲಿವೆ.
ಬೆಳಿಗ್ಗೆ 11 ಗಂಟೆಗೆ ಶ್ರೀ ಗೋಣಿ ಬಸವೇಶ್ವರ ಹಾಗೂ ನಾಗದೇವತಾ ಸ್ವಾಮಿಗಳಿಗೆ ಅಮಾವಾಸ್ಯೆಯ ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ ನಡೆಯುವುದು. ನಂತರ 11.30 ಕ್ಕೆ ಮಹಾ ಪ್ರಸಾದ ಸೇವೆ ಜರುಗುವುದು.
ಚಂದ್ರಪ್ಪ ಸೇತ್ ಸನದಿ ಶ್ರೀಮತಿ ಕಮಲಮ್ಮ ಪ್ರಸಾದದ ವ್ಯವಸ್ಥೆ ಏರ್ಪಡಿಸಿದ್ದಾರೆ. ಶ್ರೀ ಗೋಣಿ ಬಸವೇಶ್ವರ ಸ್ವಾಮಿ ಹೊರಮಠ ಹಾಗೂ ಶ್ರೀ ಹನುಮಂತದೇವರ ಜೀರ್ಣೋದ್ಧಾರ ಸಮಿತಿ ಆಶ್ರಯದಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಅಧ್ಯಕ್ಷ ಜಿ.ಎಂ. ನಾಗೇಂದ್ರಪ್ಪ, ಕಾರ್ಯದರ್ಶಿ ಗೌಡ್ರ ಚನ್ನಬಸಪ್ಪ ತಿಳಿಸಿದ್ದಾರೆ.