ಮತದಾನ ಮಾಡಿ ಬಹುಮಾನ ಗೆಲ್ಲಿ

ದಾವಣಗೆರೆ, ಮೇ 6- ನಗರದ 42ನೇ ವಾರ್ಡಿನ ಮತದಾರರು, ಮತ ಚಲಾಯಿಸಿ ಆಕರ್ಷಕ ಬಹುಮಾನ ಗೆಲ್ಲುವ ಅವಕಾಶವನ್ನು ನಗರದ ವಿಶ್ವ ಪೇಪರ್‌ ಸ್ಟಾಲ್‌ ಕಲ್ಪಿಸಿದೆ. ನಾಳೆ ದಿನಾಂಕ 7ರ ಇಂದು ಬೆಳಗ್ಗೆ 7ರಿಂದ ಸಂಜೆ 6ರೊಳಗೆ ಮತ ಚಲಾಯಿಸಿ ಶಾಹಿ ಹಚ್ಚಿದ ತೋರು ಬೆರಳು ಪೂರ್ಣವಾಗಿ ಕಾಣುವಂತೆ ಸೆಲ್ಫಿ, ಮೊಬೈಲ್‌ ಸಂಖ್ಯೆ, ವೋಟರ್‌ ಐಡಿ ಮತ್ತು ಎಪಿಕ್‌ ಸಂಖ್ಯೆಯೊಂದಿಗೆ 9036315175 ವ್ಯಾಟ್ಸ್ಯಾಪ್‌ ಮಾಡಲು ಪ್ರಕಟಣೆ ತಿಳಿಸಿದೆ.

ಪ್ರಥಮ ಬಹುಮಾನವಾಗಿ (ಆಂಡ್ರಾಯ್ಡ್ ಮೊಬೈಲ್‌), ದ್ವಿತೀಯ (ಸಿರಿಧಾನ್ಯ ಪಂಚರತ್ನ ಕಿಟ್ 10 ಜನರಿಗೆ), ತೃತೀಯ (ಕಥಾ-ಕವನ-ವಚನಗಳ ಪುಸ್ತಕಗಳು 10 ಜನ) ಪಡೆಯಬಹುದು.

error: Content is protected !!