ಮಲೇಬೆನ್ನೂರು, ಮೇ 5- ಜಿ.ಬೇವಿನಹಳ್ಳಿ ಗ್ರಾಮದಲ್ಲಿ ಭಾನುವಾರ ಸಮರ್ಥ್ ಮಲ್ಲಿಕಾರ್ಜುನ್ ಅವರು, ತಮ್ಮ ತಾಯಿ ಡಾ. ಪ್ರಭಾ ಮಲ್ಲಿಕಾರ್ಜುನ್ ಪರ ಬರಿಗಾಲಿನಿಂದ ಸಂಚರಿಸಿ, ಮತಯಾಚನೆ ಮಾಡುವ ಮೂಲಕ ಗ್ರಾಮಸ್ಥರ ಗಮನ ಸೆಳೆದರು. ನನ್ನ ತಾಯಿಯ ಗೆಲುವಿಗಾಗಿ ಪ್ರಾರ್ಥಿಸಿ, ಬರಿಗಾಲಿನಿಂದಲೇ ಎಲ್ಲಾ ಕಡೆ ಓಡಾಡಿ ಮತಯಾಚನೆ ಮಾಡುತ್ತಿದ್ದೇನೆ ಎಂದು ಸಮರ್ಥ್ ಗ್ರಾಮಸ್ಥರಿಗೆ ತಿಳಿಸಿದರು. ಗ್ರಾಮದ ಮುಖಂಡ ಹೆಚ್.ಬಿ.ಶ್ರೀಕಾಂತ್, ಬಿ.ಕೆ.ಗದಿಗೆಪ್ಪ, ಎಂ.ಚಂದ್ರಪ್ಪ, ಹೆಚ್.ಬಂಗಾರಪ್ಪ ಸೇರಿದಂತೆ ಇನ್ನು ಅನೇಕರು ಈ ವೇಳೆ ಇದ್ದರು.
December 22, 2024