ಹರಿಹರ, ಮೇ 5- ಹರಿಹರ ತಾಲ್ಲೂಕಿನ ಗುತ್ತೂರು ಬಡಾವಣೆಯ ಸುತ್ತಮುತ್ತಲಿನಲ್ಲಿ ದಾವಣಗೆರೆ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಪರ ಬಿರುಸಿನ ಪ್ರಚಾರವನ್ನು ಮಾಜಿ ಶಾಸಕ ರಾಮಪ್ಪ, ಹೆಚ್.ಎಸ್. ನಾಗರಾಜ್, ನಂದಿಗಾವಿ ಶ್ರೀನಿವಾಸ್, ವಾಗೀಶ್ ಸ್ವಾಮಿ ಹಾಗೂ ಹಾಲನಗೌಡ ಅವರ ನೇತೃತ್ವದಲ್ಲಿ ನಡೆಸಲಾಯಿತು.
ಇದೇ ವೇಳೆ ಜೆಡಿಎಸ್ ಮುಖಂಡ ಗುತ್ತೂರಿನ ಶಂಕರಗೌಡ್ರು ಹೆಚ್.ಎಸ್.ನಾಗರಾಜ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು. ಪ್ರಚಾರ ಕಾರ್ಯಕ್ರಮದಲ್ಲಿ ಮುಖಂಡರಾದ ಲಿಂಗರಾಜ್ ಮುತ್ತಗಿ, ರಾಜಾನಾಯ್ಕ್ ನಾಗರಕಟ್ಟೆ, ಬಾತಿ ಶ್ರೀಧರ್, ಬಾಬಣ್ಣ, ರಾಜು ಬೆಳ್ಳೂಡಿ, ಇಟಗಿ ನಾಗಣ್ಣ, ನರೇಂದ್ರ ಹಾಗೂ ಪಕ್ಷದ ಕಾರ್ಯಕರ್ತರುಗಳು ಇದ್ದರು.