ಹರಿಹರ, ಮೇ 5- ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಪರವಾಗಿ ಹರಿಹರ ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರು ಗುತ್ತೂರು, ಗಂಗನಹರಸಿ, ದೀಟೂರು, ಸಾರಥಿ, ಪಾಮೇನಹಳ್ಳಿ, ಚಿಕ್ಕಬಿದರಿ, ಕುರುಬರಹಳ್ಳಿ, ಕರ್ಲಹಳ್ಳಿ, ಬುಳ್ಳಾಪುರ, ವಟಗನಹಳ್ಳಿ, ಕೊಂಡಜ್ಜಿ, ದೊಗ್ಗಳ್ಳಿ, ಅಮರಾವತಿ ಸೇರಿದಂತೆ ವಿವಿಧ ಗ್ರಾಮ ಗಳಲ್ಲಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್. ರಾಮಪ್ಪ, ಜನತಾ ಬಜಾರ್ ಮಾಜಿ ಅಧ್ಯಕ್ಷ ಹೆಚ್.ಎಸ್.ನಾಗರಾಜ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಜಿಪಂ ಮಾಜಿ ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ, ತಾ.ಪಂ. ಮಾಜಿ ಸದಸ್ಯ ಜಿ.ಬಿ. ಹಾಲೇಶಗೌಡ್ರು, ಗುತ್ತೂರು ನಾಗರಾಜ್, ಗಂಗಾಧರ್, ಅಶೋಕ ಮೇಷ್ಟ್ರು, ನೇತ್ರಾವತಿ ಪ್ಯಾಟಿ ಮತ್ತಿತರರು ಹಾಜರಿದ್ದರು.
December 21, 2024