ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ

ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ

ದಾವಣಗೆರೆ, ಮೇ 2- ದಾವಣಗೆರೆ ಲೋಕಸಭೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಕನಸಿನಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ ಎಂದು  ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್ ಹೇಳಿದರು.

ತಾಲ್ಲೂಕಿನ ದೊಗ್ಗಳ್ಳಿ, ದೊಡ್ಡ ಬೂದಿಹಾಳ್, ಅರಸಾಪುರ, ಕೋಡಿಹಳ್ಳಿ, ಚಿಕ್ಕಬೂದಿಹಾಳು, ದೊಡ್ಡಬಾತಿ ಸೇರಿದಂತೆ ಹಲವು ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿ ಅವರು ಮಾತನಾಡಿದರು.

ನಾನು ಗೆದ್ದರೆ ಜಿಲ್ಲೆಗೆ ಐಟಿ-ಬಿಟಿ, ಫುಡ್ ಪ್ರೊಸೆಸಿಂಗ್ ಘಟಕಗಳು, ಆಗ್ರೋ ಇಂಡಸ್ಟ್ರೀಸ್,  ಬೆಳೆಗಳ ಸಂಶೋಧನಾ ಕೇಂದ್ರ, ಅಡಿಕೆ ಸಂಬಂಧಿತ ಕೈಗಾರಿಕೆಗಳು, ಮತ್ತು ದ್ರಾವಿಡ್ ಪ್ರಕಾಶ್ ಪಡುಕೋಣೆ ಅಕಾಡೆಮಿ ಮಾದರಿಯಲ್ಲಿ ಅಕಾಡೆಮಿ ಸ್ಥಾಪಿಸುವ ಗುರಿ ಹೊಂದಿದ್ದೇನೆ ಎಂದು ವಿವರಿಸಿದರು.

ಜವಳಿ ಪಾರ್ಕ್‌, ಟೆಕ್ಸ್ ಟೈಲ್ಸ್ ಉದ್ಯಮಕ್ಕೆ ಉತ್ತೇಜನ, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ, ಏತ ನೀರಾವರಿ ಯೋಜನೆ ಮತ್ತು ಭದ್ರಾ ಮೇಲ್ದಂಡೆ ಯೋಜನೆ ಕಾರ್ಯಗತಗೊಳಿಸಲು  ನನ್ನನ್ನು ಲೋಕಸಭೆಗೆ ಕಳುಹಿಸಿ ಎಂದು ಮನವಿ ಮಾಡಿದರು. ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಹೋರಾಟದಲ್ಲಿ ಪಕ್ಷೇತರ  ಅಭ್ಯರ್ಥಿಗೆ ಲಾಭ ಎಂಬುದು ಜನರ ಭಾವನೆಯಾಗಿದೆ. ಆದರೆ ನಾನು ನನ್ನದೇ ತತ್ವ-ಸಿದ್ಧಾಂತದಲ್ಲಿ ಜಿಲ್ಲೆಯ ಅಭಿವೃದ್ಧಿಯ ಧ್ಯೇಯ ಇಟ್ಟುಕೊಂಡಿದ್ದೇನೆ ಎಂದರು.

ಈ ವೇಳೆ ದೊಡ್ಡಬೂದಿಹಾಳ್ ಗ್ರಾಮದ ಸಿದ್ಧಪ್ಪ, ಮುರುಗೇಶ್, ಚಂದ್ರಪ್ಪ, ಈಶಣ್ಣ, ಗೌಡ್ರು ಸಿದ್ಧಬಸಪ್ಪ, ಕುಮಾರ್, ಪ್ರವೀಣ್ ಕುಮಾರ್, ಸೋಮಣ್ಣರ ಬಸಣ್ಣ, ಗಿರೀಶ್, ಹನುಮಂತಣ್ಣ, ಚಿಕ್ಕಬೂದಿಹಾಳು ಗ್ರಾಮದ ಹನುಮಂತಪ್ಪ, ರುದ್ರಪ್ಪ, ಪ್ರಕಾಶ್, ಸಣ್ಣ ರುದ್ರಪ್ಪ, ಪ್ರಕಾಶ್, ಅನಂತ, ಮಹೇಶ್, ಗಿರೀಶ್, ಬಸವರಾಜ್, ಅಣ್ಣಪ್ಪ, ಕೋಡಿಹಳ್ಳಿ ಗ್ರಾಮದ ಆನಂದ್, ಕುಮಾರ್, ದುರುಗೇಶ್, ಹರೀಶ್, ಮಧು, ಪ್ರದೀಪ್ ಮತ್ತು ಇತರರಿದ್ದರು.

error: Content is protected !!