ಅಮರಾವತಿಯಲ್ಲಿ ಸಂಭ್ರಮದ ಗ್ರಾಮ ದೇವತೆಗಳ ಹಬ್ಬ

ಅಮರಾವತಿಯಲ್ಲಿ ಸಂಭ್ರಮದ ಗ್ರಾಮ ದೇವತೆಗಳ ಹಬ್ಬ

ಹರಿಹರ, ಏ.30- ನಗರದ ಹೊರವಲಯದ ಅಮರಾವತಿ ಗ್ರಾಮದಲ್ಲಿ ಗ್ರಾಮ ದೇವತೆಗಳಾದ ಚೌಡೇಶ್ವರಿ ದೇವಿ ಮತ್ತು ಊರಮ್ಮ ದೇವಿಯ ಹಬ್ಬವು ಸಡಗರ – ಸಂಭ್ರಮದಿಂದ ನಡೆಯಿತು.

ದೇವಿಗೆ ಬೆಳಗ್ಗೆ ವಿಶೇಷ ಪೂಜೆ ಅಲಂಕಾರ, ಕುಂಕುಮಾರ್ಚನೆ, ಭಕ್ತಾದಿಗಳಿಂದ ಫಲಪುಷ್ಪ ಸಮರ್ಪಣೆ ಹಾಗೂ ಹರಕೆ ಒಪ್ಪಿಸುವುದು. ಸಂಜೆ ಚರಗ ಬೇಯಿಸಿ, ರಾತ್ರಿ ಚರಗ ಇಳಿಸಿ ರಾಶಿ ಮಾಡಿ, ರಾತ್ರಿ 11-45 ಕ್ಕೆ ಅಮ್ಮನವರ ಮಾಂಗಲ್ಯಧಾರಣೆ ನಂತರ ಅಮ್ಮನವರನ್ನು ಮೆರವಣಿಗೆಯ  ಉತ್ಸವದೊಂದಿಗೆ ಗೌಡ್ರು ಮನೆಯಿಂದ ಘಟ್ಟಿಗಡಿಗೆ ದ್ವೀಪ ಮತ್ತು ಗಂಗಣ್ಣನವರ ಮನೆಯಿಂದ ನೈವೇದ್ಯ, ಬಾಳೇಮರದವರ ಮನೆಯಿಂದ ಉಲಸಿನ ಪುಟ್ಟಿ ವಗೈರೆ ದೇವಸ್ಥಾನದ ಆವರಣಕ್ಕೆ ತಂದು ಬೆಳಗಿನ ಜಾವ ಹಿಟ್ಟಿನಿಂದ ಮಾಡಿದ ಕೋಣವನ್ನು ವಧೆ ಮಾಡಿದ ನಂತರ ಗ್ರಾಮದ ಪ್ರಮುಖ ವೃತ್ತದಲ್ಲಿ ಚರಗ ಚೆಲ್ಲುವ ಮೂಲಕ ಹಬ್ಬವನ್ನು ಆಚರಿಸಲಾಯಿತು.

ಗ್ರಾಮದ ಯುವಕರು ಉದೋ ಉದೋ, ಉಲಿಗ್ಗೆ ಉಲಿಗ್ಗೆ ಎಂದು ದೇವಿಯನ್ನು ಆರಾಧಿಸುವುದರೊಂದಿಗೆ ಡಿಜೆ ಸೌಂಡ್ ಸಿಸ್ಟಮ್ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರು.  ನಾಳೆ ದಿನಾಂಕ 1 ರ ಬುಧವಾರ ಬೆಳಗ್ಗೆ 8.30 ಕ್ಕೆ ಪೆಂಡಾಲಿನಲ್ಲಿ ಅಮ್ಮನವರಿಗೆ ಮಂಗಳ ಸ್ನಾನ, ಅಲಂಕಾರ, ಸಾರ್ವಜನಿಕರಿಂದ ಫಲ ಸಮರ್ಪಣೆ, ಸಂಜೆ 5 ಗಂಟೆಗೆ ವಿವಿಧ ವಿನೋದಾವಳಿಗಳು ಶ್ರೀದೇವಿ ಪುರಾಣ, ಭಜನೆ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ.

error: Content is protected !!