ಹರಿಹರ, ಏ, 29- ಸಂವಿಧಾನ, ಪ್ರಜಾತಂತ್ರ, ಬಹುತ್ವ ಭಾರತ ಉಳಿವಿಗಾಗಿ ಕಮ್ಯುನಿಸ್ಟ್ ಪಕ್ಷವು ಮೇ 7 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ತೀರ್ಮಾನ ಮಾಡಲಾಗಿದೆ ಎಂದು ಕಮ್ಯುನಿಸ್ಟ್ ಪಕ್ಷದ ಮುಖಂಡರು ತಿಳಿಸಿದರು.
ಹಂಸಾಗರ ಕಾಂಪೌಂಡ್ ಆವರಣದಲ್ಲಿ ರುವ ಕಮ್ಯುನಿಸ್ಟ್ ಪಕ್ಷದ ನರಸಿಂಹನ್ ಭವನ ದಲ್ಲಿ ಜರುಗಿದ ಕಮ್ಯುನಿಸ್ಟ್ ಪಕ್ಷದ ಮುಖಂ ಡರ, ಪ್ರಗತಿಪರ ಚಿಂತಕರ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು.
ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಕಾರ್ಮಿಕರ ಹಕ್ಕುಗಳನ್ನು ಮೊಟಕು ಗೊಳಿಸಿದೆ. ಕಾರ್ಪೊರೇಟ್ ಕಂಪನಿಗಳಿಗೆ ಅನು ಕೂಲವಾಗಲೆಂದು 4 ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಅನುಷ್ಠಾನಕ್ಕೆ ತಂದು, ಕಾರ್ಮಿಕರ ಶಕ್ತಿಯನ್ನು ಕುಗ್ಗಿಸಿದೆ. ಕೆಲಸದ ಭದ್ರತೆ ಇಲ್ಲದಂತಾಗಿದೆ. ಮೊದಲಿನಂತೆ ಕಾರ್ಮಿಕ ಸಂಘಗಳು ಮುಷ್ಕರ ಮಾಡಿದರೆ ದಂಡ ವಿಧಿಸಲಾಗುತ್ತಿದೆ, ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿಕರಣಕ್ಕೆ ಅನುಕೂಲ ಮಾಡಿಕೊಟ್ಟಿದೆ. ಅಲ್ಲದೆ ಸಮಾಜದಲ್ಲಿನ ಸಾಮರಸ್ಯದ ಬದುಕಿಗೆ ವಿಷ ಬೀಜ ಬಿತ್ತಿದೆ. ಇಂತಹ ಅನಿಷ್ಟ ಪದ್ಧತಿಗಳ ನಿರ್ಮೂಲನೆಗಾಗಿ ಬಿಜೆಪಿ ಸರ್ಕಾರವನ್ನು ಸೋಲಿಸಬೇಕಾಗಿದೆ ಎಂದರು.
ಈ ವೇಳೆ ಮಾಜಿ ಶಾಸಕ ಎಸ್. ರಾಮಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಗೆಲುವಿನಿಂದ ದಾವಣಗೆರೆ ಜಿಲ್ಲೆಗೆ, ಹರಿಹರ ತಾಲ್ಲೂಕಿನಲ್ಲಿ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಯಾಗುವುದು ಖಂಡಿತ. ಈ ಬಗ್ಗೆ ಅನುಮಾನ ಬೇಡ. ಎಲ್ಲರೂ ಸೇರಿ ಹೆಚ್ಚಿನ ಬಹುಮತ ದಿಂದ ಅವರನ್ನು ಗೆಲ್ಲಿಸೋಣ ಎಂದರು.
ನಗರಸಭಾ ಸದಸ್ಯ ರಜನಿಕಾಂತ್ ಮಾತನಾಡಿ, ಬಡವರ, ಜನಸಾಮಾನ್ಯರ ಬದುಕಿಗೆ ಬಿಜೆಪಿಗಿಂತ ಕಾಂಗ್ರೆಸ್ ಪಕ್ಷವೇ ಲೇಸು. ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಬಂದಿ ರುವೆ. ಎಲ್ಲರೂ ಸೇರಿ ಡಾ. ಪ್ರಭಾ ಮಲ್ಲಿಕಾ ರ್ಜುನ್ ರವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿ, ನಮ್ಮ ಸ್ವಾಭಿಮಾನದ ಬದುಕಿಗೆ ನೆಮ್ಮದಿ ತಂದುಕೊಳ್ಳೋಣವೆಂದರು.
ಸಭೆಯ ಅಧ್ಯಕ್ಷತೆಯನ್ನು ಎಚ್. ಕೆ.ಕೊಟ್ರಪ್ಪ ವಹಿಸಿದ್ದರು. ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಆವರಗೆರೆ ವಾಸು, ತಾಲ್ಲೂಕ್ ಕಾರ್ಯದರ್ಶಿ ಟಿ.ಹೆಚ್. ನಾಗರಾಜ್, ಕುಮಾರ್ ನಾಯಕ್, ಮುಖಂಡರಾದ ಕೃಷ್ಣಮೂರ್ತಿ, ನಾಗರಾಜ್ ಹಿತ್ತಲಮನೆ, ಎಚ್. ಸಿ. ಮೈದೂರು, ಬಿ. ಹೆಚ್. ಚಂದ್ರಪ್ಪ, ಶಿವಕುಮಾರ್ ಸ್ವಾಮೀಜಿ, ಈರಣ್ಣ ರೆಡ್ಡಿ, ಕೆ.ಬಿ.ರಾಜಶೇಖರ್, ಸುರೇಶ್ ಹಾದಿಮನೆ, ಕೆ ಆರ್ ಗಂಗಾಧರ ಇನ್ನು ಅನೇಕರು ಉಪಸ್ಥಿತರಿದ್ದರು