ಪ್ರಭಾ ಮಲ್ಲಿಕಾರ್ಜುನ್ ನಿಮ್ಮ ಮತ ವ್ಯರ್ಥವಾಗದಂತೆ ಕೆಲಸ ಮಾಡುವರು
ದಾವಣಗೆರೆ, ಏ.28- ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿದ್ದು, ಈ ಭಾಗಕ್ಕೆ ನಾಲ್ಕು ಬಾರಿ ಸಂಸದರಾಗಿರುವವರ ಕೊಡುಗೆ ಏನು ಇಲ್ಲ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ|| ಪ್ರಭಾ ಮಲ್ಲಿಕಾರ್ಜುನ್ ಅವರು ತಿಳಿಸಿದರು.
ದಕ್ಷಿಣ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ವ್ಯಾಪ್ತಿಯ ದಾವಣಗೆರೆ ತಾಲ್ಲೂಕಿನ ಹನುಮಂತಾಪುರ ಗ್ರಾಮದಿಂದ ಇಂದು ಪ್ರಚಾರ ಕಾರ್ಯ ಆರಂಭಿಸಿದ ಪ್ರಭಾ ಮಲ್ಲಿಕಾರ್ಜುನ್ ಅವರು, ಹಳೇಬೆಳವನೂರು, ತುರ್ಚಘಟ್ಟ, ಹೊಸನಾಯ್ಕನಹಳ್ಳಿ, ಕೈದಾಳೆ, ಗಿರಿಯಾಪುರ, ಕುಕ್ಕುವಾಡ, ಹೊಸಕೊಳೇನಹಳ್ಳಿ ಮತ್ತು ಹಳೇಕೊಳೇನಹಳ್ಳಿ, ನಾಗರಸನಹಳ್ಳಿ, ಜಡಗನಹಳ್ಳಿ, ಬಲ್ಲೂರು, ಶಿರಗಾನಹಳ್ಳಿ, ಕನಗೊಂಡನಹಳ್ಳಿ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮತದಾರರನ್ನುದ್ದೇಶಿಸಿ ಅವರು ಮಾತನಾಡಿದರು.
ಶಾಮನೂರು ಶಿವಶಂಕರಪ್ಪ ಅವರು ಈ ಭಾಗದ ಶಾಸಕರಾಗಿ ಸಾಕಷ್ಟು ಅಭಿವೃದ್ಧಿ ಮಾಡಿದ್ದು, ಇನ್ನಷ್ಟು ಸಣ್ಣಪುಟ್ಟ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಆದರೆ ನಾಲ್ಕು ಬಾರಿ ಸಂಸದರಾಗಿರುವವರು ಇಲ್ಲಿ ಒಮ್ಮೆಯಾದರೂ ಬಂದು ಈ ಭಾಗದ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆಯೇ ಎಂದು ಪ್ರಶ್ನಿಸಿದರು.
ಈ ಭಾಗದಲ್ಲಿ ಶಾಮನೂರು ಶಿವಶಂಕರಪ್ಪ ನವರು ಅಭಿವೃದ್ಧಿ ಮಾಡದಿದ್ದರೆ ಸಂಸದರನ್ನು ನೆಚ್ಚಿ ಕುಳಿತಿದ್ದರೆ, ಜನರು ಸಂಕಷ್ಟದ ಪರಿಸ್ಥಿತಿ ಅನುಭವಿಸಬೇಕಾಗುತ್ತಿತ್ತು. ಇಂತಹ ಸಂಸದ ರನ್ನು ಮನೆಗೆ ಕಳುಹಿಸಬೇಕಿದೆ ಎಂದು ಅವರು ಕರೆ ನೀಡಿದರು.
ದಾವಣಗೆರೆ ದಕ್ಷಿಣ ಕ್ಷೇತ್ರದ ಗ್ರಾಮಾಂತರ ಪ್ರದೇಶ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದು, ಎಲ್ಲಾ ಕ್ಷೇತ್ರಕ್ಕೂ ಅನುದಾನ ಕಲ್ಪಿಸಲಾಗಿದೆ. ಸರ್ಕಾರಿ ಶಾಲೆಗಳನ್ನೂ ಸಹ ಅಭಿವೃದ್ಧಿ ಪಡಿಸಲಾಗಿದ್ದು, ಇನ್ನಷ್ಟು ಅಭಿವೃದ್ಧಿಯನ್ನು ಕೇಂದ್ರ ದಿಂದ ಅನುದಾನ ತಂದು ಮಾಡಲಾಗುವುದು ಎಂದರು.
ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ದಾವಣಗೆರೆ ದಕ್ಷಿಣ ಕ್ಷೇತ್ರದ ಗ್ರಾಮಾಂತರ ಪ್ರದೇಶದವರು ಸದಾ ನಮ್ಮನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಈ ಬಾರಿ ಲೋಕಸಭೆಗೆ ಪ್ರಭಾ ಮಲ್ಲಿಕಾರ್ಜುನ್ ಅವರು ಸ್ಪರ್ಧಿಸಿದ್ದು, ಹೆಚ್ಚಿನ ಬೆಂಬಲ ನೀಡಬೇಕೆಂದು ಕರೆ ನೀಡಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಭರವಸೆ ನೀಡಿತ್ತು. ಅದರಂತೆ ಸರ್ಕಾರ ಬಂದ ತಕ್ಷಣ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಇಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವೊಂದಕ್ಕೆ ಮಾರ್ಚ್ ಅಂತ್ಯಕ್ಕೆ ಸುಮಾರು ರೂ. 122 ಕೋಟಿಯಷ್ಟು ಹಣವನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದರು.
ಇನ್ನು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಪಂಚ ನ್ಯಾಯ ಪಚ್ಚೀಸ್ ಗ್ಯಾರೆಂಟಿ’ ಭರವಸೆಗಳನ್ನು ನೀಡಲಾಗಿದ್ದು, ಯುವ ನ್ಯಾಯದಡಿ ಯುವಕರಿಗೆ ಉದ್ಯೋಗ, ಮಹಿಳಾ ನ್ಯಾಯದಡಿ ಪ್ರತಿ ಮಹಿಳೆಗೆ 1 ಲಕ್ಷ ರೂ., ರೈತ ನ್ಯಾಯದಡಿ ಸ್ವಾಮಿನಾಥನ್ ಆಯೋಗವನ್ನು ಜಾರಿಗೊಳಿಸು ವುದು, ನರೇಗಾ ಕೂಲಿ ಹಣವನ್ನು ರೂ. 400 ಕ್ಕೆ ಹೆಚ್ಚಿಸಲಾಗುವುದು ಸೇರಿದಂತೆ ಹಲವು ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದ್ದು, ಅದರಂತೆ ನಾವುಗಳು ಜಾರಿಗೆ ತರುತ್ತೇವೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಜಿ.ಸಿ.ನಿಂಗಪ್ಪ, ಆರನೇಕಲ್ಲು ಮಂಜಣ್ಣ, ಕುಕ್ಕುವಾಡ ಮಂಜುನಾಥ್, ಹದಡಿ ಹಾಲಪ್ಪ, ತುರ್ಚಘಟ್ಟದ ಬಸವರಾಜಪ್ಪ, ಅನ್ವರ್, ರಿಯಾಜ್ ಅಹ್ಮದ್, ಸತೀಶ್, ಉಜ್ಜಪ್ಪ, ಚಂದ್ರ ಶೇಖರಪ್ಪ, ಮಹೇಂದ್ರ, ಗಿರೀಶ್, ಶಿರಮಗೊಂಡನಹಳ್ಳಿ ರುದ್ರೇಶ್, ಚಂದ್ರಪ್ಪ, ಶಶಿ, ಕೈದಾಳೆ ಮಲ್ಲಿಕಾರ್ಜುನ್, ಹಳೇ ಬಿಸಲೇರಿ ಗಂಗಣ್ಣ, ಕುಬೇರ, ಎ.ಕೆ.ನೀಲಪ್ಪ, ಶಿರಮ ಜಾಂಬವಂತ, ಸಂತೋಷ್, ದೇವೇಂದ್ರಪ್ಪ, ಹನುಮಂತಪ್ಪ, ಶಂಕರ್, ಲಿಂಗೇಶ್, ರಾಜಣ್ಣ, ಕರಿಬಸಪ್ಪ, ಪರಮೇಶಪ್ಪ, ತಿಪ್ಪೇಶ್, ಶಂಭಣ್ಣ, ಅಜ್ಜಣ್ಣ, ಸಾಗರ್, ಜರೀಕಟ್ಟೆ ಹನುಮಂತಪ್ಪ, ಬಟ್ಲಕಟ್ಟೆ ಬೀರೇಶ್, ಮಹೇಂದ್ರ, ಚನ್ನಬಸಪ್ಪ, ಸಿದ್ದಪ್ಪ, ಬಲ್ಲೂರು ಸ್ವಾಮಿ, ದೇವೇಂದ್ರಪ್ಪ, ಬಸವರಾಜ್, ಚಿಕ್ಕಣ್ಣ, ಸಿದ್ದಪ್ಪ, ಮಹಾಂ ತೇಶ್, ಆರನೇಕಲ್ಲು ಹನುಮಂತಪ್ಪ, ತಿಪ್ಪೇಶ್, ಮಹಾ ದೇವಪುರ ಕೃಷ್ಣ, ಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.