ದಾವಣಗೆರೆ ಎಂ.ಸಿ.ಸಿ. `ಎ’ ಬ್ಲಾಕ್ ಬಡಾವಣೆ, ಬಕ್ಕೇಶ್ವರ ಸ್ಕೂಲ್ ರಸ್ತೆ ನಿವಾಸಿ, ಪತ್ರ ಬರಹಗಾರರಾದ ಎಂ.ಜಿ.ಮಂಜುನಾಥ್ (68) ಇವರು, ದಿನಾಂಕ 22.04.2024ರ ಸೋಮವಾರ ಸಂಜೆ 4.15ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಪತ್ನಿ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 23.04.2024ರ ಮಂಗಳವಾರ ಬೆಳಿಗ್ಗೆ 10.30ಕ್ಕೆ ಗಾಂಧಿನಗರದ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಎಂ.ಜಿ.ಮಂಜುನಾಥ್
