ಕಲಾವಿದರಿಗೆ ಪ್ರಾಯೋಗಿಕ ನಿಷ್ಠೆ ಮುಖ್ಯ

ಕಲಾವಿದರನ್ನು ನೋಡುವ ಜನರ ಮನಸ್ಥಿತಿ ಬದಲಾಗಬೇಕು. ಜತೆಗೆ ಸಮಾಜದಲ್ಲಿ ಎಲ್ಲ ಕಲಾವಿದರಿಗೂ ಉತ್ತಮ ಸ್ಥಾನ ದೊರಕಬೇಕು.

– ದತ್ತಾತ್ರೇಯ ಎನ್‌. ಭಟ್

ದಾವಣಗೆರೆ, ಏ.21- ಕಲಾಕ್ಷೇತ್ರದಲ್ಲಿ ಯಶಸ್ಸು ಕಾಣಲು ಕೇವಲ ಓದಿದರೆ ಸಾಲದು, ನಿಷ್ಠೆಯಿಂದ ಪ್ರಾಯೋಗಿಕ ಕಾರ್ಯ ಮಾಡಬೇಕು ಎಂದು ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಸತೀಶ್ ಕುಮಾರ್‌ ಪಿ. ವಲ್ಲೇಪುರೆ ಹೇಳಿದರು.

ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ವಿಶ್ವ ದೃಶ್ಯಕಲಾ ದಿನಾಚರಣೆಯಲ್ಲಿ ಅವರು `ಲಿಯೊನಾರ್ಡೋ ಡ ವಿಂಚಿ’ ಕುರಿತು ಉಪನ್ಯಾಸ ನೀಡಿದರು.

`ಲಿಯೊನಾರ್ಡೋ ಡ ಮಿಂಚಿ’ ಅವರು ತಮ್ಮ ಬಾಲ್ಯಾವಸ್ಥೆಯಿಂದಲೇ ಕಲೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಕಲಾಕೃತಿಯಲ್ಲಿ ವಿಶೇಷ ಸಾಧನೆ ಮಾಡಿದ ಇವರ ಜನ್ಮದಿನದ ಅಂಗವಾಗಿ 2011ರಿಂದ ವಿಶ್ವ ದೃಶ್ಯಕಲಾ ದಿನಾಚರಣೆ ಆಚರಿಸಲು ಪ್ರಾರಂಭಿಸಿದರು ಎಂದು ತಿಳಿಸಿದರು.

ಇಂಜಿನಿಯರಿಂಗ್‌ ಚಿತ್ರಗಳು, ದೇಹದ ಅಂಗರಚನಾ ಶಾಸ್ತ್ರದ ಚಿತ್ರ ಬಿಡಿಸುವ ಮೂಲಕ  ವೈದ್ಯಕೀಯ ಕ್ಷೇತ್ರಕ್ಕೆ ಅನೇಕ ಕೊಡುಗೆ ನೀಡಿದ್ದಾರೆ ಎಂದರು.

ಲಿಯೊನಾರ್ಡೋ ಡ ವಿಂಚಿ ಅವರು ಕಲಾಕೃತಿ ರಚಿಸುವ ಮೊದಲು ವಸ್ತುವಿನ ಅಂಗವನ್ನು ಸೂಕ್ಷ್ಮಹಾಗೂ ಗಂಭೀರವಾಗಿ ಗಮನಿಸುತ್ತಿದ್ದ ತಂತ್ರಗಳನ್ನು ಕಲಾ ವಿದ್ಯಾರ್ಥಿಗಳು ಕಲಿಕೆಯಲ್ಲಿ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

`ಮತದಾನ ಜಾಗೃತಿ’ ಕುರಿತು ಬೋಧನಾ ಸಹಾಯಕ  ದತ್ತಾತ್ರೇಯ ಎನ್‌. ಭಟ್ ಉಪನ್ಯಾಸದಲ್ಲಿ ಮಾತನಾಡಿ,  ಯುವಕರು ಮತದಾನ ಪ್ರಕ್ರಿಯೆಯಿಂದ ಹಿಂದೇಟು ಹಾಕುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಮೋಸ ಎಂದರು.

ಮತದಾನ ಮಾಡುವುದು ಪ್ರತಿಯೊಬ್ಬನ ಆದ್ಯ ಕರ್ತವ್ಯ. ಮತದಾನವನ್ನು ನಿಷ್ಠೆ ಹಾಗೂ ಜವಾಬ್ದಾರಿಯಿಂದ ಮಾಡುವಂತೆ ಹೇಳಿದರು.

ಮೇ.7ರಂದು ಮತದಾನ ಮಾಡುವ ಮೂಲಕ ನಮ್ಮ ಹಕ್ಕನ್ನು ಚಲಾಯಿಸಿ ಉತ್ತಮ ಜನಪ್ರತಿನಿಧಿ ಆಯ್ಕೆ ಮಾಡೋಣ ಎಂದು ಹೇಳಿದರು.

ಪ್ರಾಚಾರ್ಯ ಡಾ. ಜೈರಾಜ್‌ ಎಂ. ಚಿಕ್ಕಪಾಟೀಲ್‌, ಸಂಚಾಲಕರಾದ ಡಿ. ಸುರೇಶ್‌, ಆರ್‌. ಅರುಣ್‌, ನಿವೃತ್ತ ಪ್ರಾಧ್ಯಾಪಕ ರವೀಂದ್ರ, ಶಿಲ್ಪಾ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

ಎ.ಆರ್‌. ನವ್ಯಾ ಪ್ರಾರ್ಥನೆ ಮಾಡಿದರು. ಬೋಧನಾ ಸಹಾಯಕ ನವೀನ್‌ ಕುಮಾರ್‌ ಸ್ವಾಗತಿಸಿದರು.

error: Content is protected !!