ರಾಘವೇಂದ್ರ ಹೈಟೆಕ್ ಕಾಲೇಜಿಗೆ ಶೇ.99.2 ಫಲಿತಾಂಶ

ರಾಘವೇಂದ್ರ ಹೈಟೆಕ್ ಕಾಲೇಜಿಗೆ ಶೇ.99.2 ಫಲಿತಾಂಶ

ದಾವಣಗೆರೆ, ಏ. 21 – ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ರಾಘವೇಂದ್ರ ಹೈಟೆಕ್ ಪದವಿ ಪೂರ್ವ ಕಾಲೇಜಿಗೆ ಶೇ. 99.2 ಫಲಿತಾಂಶ ಬಂದಿದೆ.

ವಿಜ್ಞಾನ ವಿಭಾಗದಿಂದ 123 ವಿದ್ಯಾರ್ಥಿಗಳಲ್ಲಿ 74 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 47 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಕೆ.ಎಂ. ಸಿಂಚನ 600 ಕ್ಕೆ 589 ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಎಸ್. ಸಾಗರ್ 586, ಎಂ.ಎಂ.ಪೂಜಾ 584, ಪಿ.ಕಿರಣ್‌ ಕುಮಾರ್ 582, ಕೀರ್ತನ ನಾಗನಗೌಡ 580 ಅಂಕಗಳನ್ನು ಪಡೆದುಕೊಂಡಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 5 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 15 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಹೆಚ್.ಟಿ. 560, ಕೆ.ಆರ್. ವರ್ಷಿಣಿ 556, ಡಿ.ಹೆಚ್. ಐಶ್ವರ್ಯ 543 ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.  ಕಾಲೇಜಿನ ಪ್ರಾಚಾರ್ಯ ಡಾ. ಅನಿಲ್ ಕುಮಾರ್ ಶ್ಯಾಗಲೆ ಹಾಗೂ ಉಪನ್ಯಾಸಕ ವರ್ಗದವರು ಅಭಿನಂದಿಸಿದ್ದಾರೆ. 

error: Content is protected !!