ದಾವಣಗೆರೆ, ಏ.18 – ಮಾರ್ಚ್ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲ್ಲೂಕಿನ ಕಕ್ಕರಗೊಳ್ಳ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶೇ.85.62 ಫಲಿತಾಂಶ ಲಭಿಸಿದೆ. ವಿಜ್ಞಾನ ವಿಭಾಗದ ಜಿ.ಎ. ಕಾವ್ಯ 559 ಅಂಕ, ವಾಣಿಜ್ಯ ವಿಭಾಗದ ಎನ್.ಡಿ. ದೀಪಾ 571 ಅಂಕ, ಕಲಾ ವಿಭಾಗದ ಟಿ. ಅನುಷಾ 535 ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಿಂದ 3, ವಾಣಿಜ್ಯ ವಿಭಾಗದಿಂದ 8, ಕಲಾ ವಿಭಾಗದಿಂದ 4 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಎಲ್.ಎಸ್. ತುಳಸಿ ಕನ್ನಡ ವಿಷಯದಲ್ಲಿ 100 ಕ್ಕೆ 100 ಅಂಕಗಳನ್ನು ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
January 23, 2025