ದಾವಣಗೆರೆ, ಏ.17- ವಿದ್ಯುತ್ ಸ್ಪರ್ಶದಿಂದಾಗಿ ಸ್ಥಳೀಯ ವಿಜಯನಗರ ಬಡಾವಣೆಯ ಸವಿತಾ ಸಮಾಜದ ಶಾಂತಕುಮಾರ್ ಪುತ್ರ ಹೇಮಂತ್ ಕುಮಾರ್ (12) ಮೃತಪಟ್ಟಿದ್ದಾನೆ.
ಗಂಗಾವತಿಯ ಅಜ್ಜಿಯ ಮನೆಯಲ್ಲಿ ಸ್ನಾನಕ್ಕೆಂದು ಹಾಕಿದ್ದ ಗೀಸರ್ನಿಂದ ವಿದ್ಯುತ್ ಸ್ಪರ್ಶವಾಗಿ ಬಾಲಕ ಮೃತಪಟ್ಟಿದ್ದಾನೆ. ದೇವರಾಜ ಅರಸು ಬಡಾವಣೆಯ `ಸಿ’ ಬ್ಲಾಕ್ನಲ್ಲಿನ ಸರ್ಕಾರಿ ಶಾಲೆಯಲ್ಲಿ ಬಾಲಕ ಆರನೇ ತರಗತಿ ತೇರ್ಗಡೆ ಹೊಂದಿದ್ದು ಏಳನೇ ತರಗತಿಗೆ ಪ್ರವೇಶ ಮಾಡಬೇಕಿತ್ತು.
ಶಾಲೆ ರಜೆ ಇರುವುದರಿಂದ ಅಜ್ಜಿಯ ಊರಾದ ಗಂಗಾವತಿಗೆ ತಂಗಿಯ ಜತೆಗೆ ಹೋಗಿದ್ದು ಇಂದು ಬೆಳಿಗ್ಗೆ ಘಟನೆ ಜರುಗಿದೆ. ಬಾಲಕನ ಮೃತ ದೇಹವನ್ನು ನಗರದ ನಿವಾಸಕ್ಕೆ ತರಲಾಗಿದೆ.