ದಾವಣಗೆರೆ, ಏ.17- ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಮತದಾನ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ನಾಲ್ಕನೇ ದಿನವಾದ ಏ. 17 ರಂದು 6 ಅಭ್ಯರ್ಥಿಗಳಿಂದ 6 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ. ಕಂಟ್ರಿ ಸಿಟಿಜನ್ ಪಾರ್ಟಿಯಿಂದ ಎ.ಟಿ.ದಾದಾ ಖಲಂದರ್, ನವಭಾರತ ಸೇನಾ ಪಕ್ಷದಿಂದ ಎಂ.ಜಿ.ಶ್ರೀಕಾಂತ್, ಪಕ್ಷೇತರರಾಗಿ ಮೊಹಮದ್ ಹಯಾತ್, ಎಂ.ಟಿ.ಚಂದ್ರಣ್ಣ, ಕೆ.ಸೈಯದ್ ಜಬೀವುಲ್ಲಾ, ಜಿ.ಬಿ.ವಿನಯ್ಕುಮಾರ್ ನಾಮಪತ್ರ ಸಲ್ಲಿದ್ದು ಇದುವರೆಗೆ ಒಟ್ಟು 20 ಅಭ್ಯರ್ಥಿಗಳಿಂದ 24 ನಾಮಪತ್ರಗಳು ಸಲ್ಲಿಕೆಯಾಗಿವೆ. ಏ.12 ರಂದು ಐದು ಅಭ್ಯರ್ಥಿಗಳಿಂದ 6 ನಾಮಪತ್ರಗಳು, ಏ.15 ರಂದು 8 ಅಭ್ಯರ್ಥಿಗಳಿಂದ 9 ನಾಮಪತ್ರಗಳು ಹಾಗೂ ಏ.16 ರಂದು 3 ಅಭ್ಯರ್ಥಿಗಳಿಂದ 3 ನಾಮಪತ್ರಗಳು, ಏ.17 ರಂದು 6 ಅಭ್ಯರ್ಥಿಗಳಿಂದ 6 ನಾಮಪತ್ರಗಳು ಸಲ್ಲಿಕೆಯಾಗಿವೆ.
January 10, 2025