ಹರಪನಹಳ್ಳಿ, ಏ. 12 – ತಾಲೂಕಿನ ಹಂಪಾಪುರ ಗ್ರಾಮಕ್ಕೆ ಶುಕ್ರವಾರ ತಹಶೀಲ್ದಾರ್ ಗಿರೀಶ್ಬಾಬು ಭೇಟಿ ನೀಡಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡದಂತೆ ಗ್ರಾಮಸ್ಥರ ಮನವೊಲಿಸಿದರು.
ಬಸ್ ಸೌಲಭ್ಯ ಸೇರಿದಂತೆ ಇತರೆ ಮೂಲ ಭೂತ ಸೌಕರ್ಯಗಳ ಕೊರತೆಯ ಹಿನ್ನೆಲೆಯಲ್ಲಿ ಇತ್ತೀಚೆಗೆ ಗ್ರಾಮಸ್ಥರು ಗ್ರಾಮದಲ್ಲಿ ಸಭೆ ನಡೆಸಿ ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವ ನಿರ್ಧಾರ ಕೈಗೊಂಡಿದ್ದರು.
ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಸಾರಿಗೆ ಇಲಾಖೆ ಮತ್ತು ಗ್ರಾಮ ಪಂಚಾಯ್ತಿ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಜೊತೆ ಸಭೆ ನಡೆಸಿ ಗ್ರಾಮಕ್ಕೆ ಬಸ್ ಸೌಲಭ್ಯ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳ ಕೊರತೆ ನಿವಾರಣೆಗೆ ಕೂಡಲೇ ಕ್ರಮವಹಿಸ ಲಾಗುವುದು ಮತದಾನ ಬಹಿಷ್ಕಾರ ಮಾಡದಂತೆ ಮನವಿ ಮಾಡಿದರು. ಇದಕ್ಕೆ ಗ್ರಾಮಸ್ಥರು ಒಪ್ಪಿ ಮತದಾನ ಬಹಿಷ್ಕಾರದ ನಿರ್ಧಾರವನ್ನು ಹಿಂಪಡೆದಿದ್ದಾರೆ.
ಈ ಸಂದರ್ಭದಲ್ಲಿ ಸಾರಿಗೆ ಇಲಾಖೆ ಅಧಿಕಾರಿ ಮಂಜುಳಾ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕೆ.ಆನಂದ ನಾಯ್ಕ್, ಶಿಕ್ಷಣ ಇಲಾಖೆಯ ವೀರೇಶ, ನಂದೀಶಬಾಬು, ಗ್ರಾಮದ ಮುಖಂಡರಾದ ಬಿ.ಲಕ್ಷ್ಮಣ್, ಕರಿಬಸಪ್ಪ, ಮಲ್ಲಿಕಾರ್ಜುನ, ಗಂಗಪ್ಪ, ದುರುಗಪ್ಪ, ಬಸವರಾಜ, ಗೋಣೆಪ್ಪ, ಹಳ್ಳಿ ಪ್ರಕಾಶ, ಅಂಗಡಿ ಬಸವರಾಜ, ಬಣಕಾರ ಪ್ರಕಾಶ, ಬಸಪ್ಪ, ಷಣ್ಮುಖಪ್ಪ, ಅಂಜಿನಪ್ಪ, ಕೊಟ್ರೇಶ, ತಿರುಪತಿ, ಗಿರೀಶ ಸೇರಿದಂತೆ ಇತರರು ಇದ್ದರು.