ಚೀಲೂರಲ್ಲಿಂದು ವೀರಭದ್ರೇಶ್ವರ ಸ್ವಾಮಿ ಪ್ರವೇಶೋತ್ಸವ

ಚೀಲೂರಲ್ಲಿಂದು ವೀರಭದ್ರೇಶ್ವರ ಸ್ವಾಮಿ ಪ್ರವೇಶೋತ್ಸವ

ನ್ಯಾಮತಿ ತಾಲ್ಲೂಕಿನ  ಚೀಲೂರು ಶ್ರೀ ವೀರಭದ್ರೇಶ್ವರ ಸ್ವಾಮಿ, ಶ್ರೀ ಈಶ್ವರ ದೇವಾಲಯದ ಪ್ರವೇಶೋತ್ಸವ, ಕಳಸಾರೋಹಣ, ಧರ್ಮಸಭೆ, ಶ್ರೀ ವೀರಭದ್ರೇಶ್ವರ ಸ್ವಾಮಿ, ಶ್ರೀ ಲಕ್ಷ್ಮಿರಂಗನಾಥ ಸ್ವಾಮಿ ಕೆಂಡದಾರ್ಚನೆ ಹಾಗೂ ರಥೋತ್ಸವದ ಪ್ರಯುಕ್ತ ಇಂದು ಬೆಳಗಿನ ಜಾವ 3 ರಿಂದ 4.30 ರವರೆಗೆ ಸುಮಂಗಲಿಯರಿಂದ ಗಂಗೆ ಪೂಜೆ, ಶ್ರೀ ವೀರಭದ್ರೇಶ್ವರ ಸ್ವಾಮಿ, ಶ್ರೀ ಈಶ್ವರ ದೇವರ ದೇವಾಲಯಗಳ ಪ್ರವೇಶ, ಗಣಪತಿ ಪೂಜೆ, ಉಮಾಮಹೇಶ್ವರಿ ಸ್ವಸ್ತಿ ಪುಣ್ಯಾಹ ನಾಂದಿ ಸಮಾರಾಧನೆ ಗುರುಕಲಶ, ನವಗ್ರಹ ಅಷ್ಟದಿಕ್ಪಾಲಕರ ಹಾಗೂ ಗ್ರಾಮಶಾಂತಿಗಾಗಿ ಮಹಾಗಣಪತಿ ರುದ್ರಹೋಮ, ವಾಸ್ತುಶಾಂತಿ, ಮೃತ್ಯುಂಜಯ ಹೋಮಗಳು ನಡೆಯುತ್ತವೆ.

ಬೆಳಿಗ್ಗೆ 8.45 ರಿಂದ 9 ರವರೆಗೆ ಸುಬ್ರಹ್ಮಣ್ಯ ದೇವರ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಗು ವುದು. ಮಧ್ಯಾಹ್ನ 1 ಕ್ಕೆ ಶ್ರೀ ವೀರಭದ್ರೇಶ್ವರ ದೇವಾಲಯದ ಆವರಣದಲ್ಲಿ ಧರ್ಮಸಭೆ ನಡೆಯುತ್ತದೆ ಎಂದು ಹೇಳಿದರು.

ಸಿರಿಗೆರೆಯ ಶ್ರೀ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಹೊನ್ನಾಳಿ ಹಿರೇಕಲ್ಮಠದ ಶ್ರೀ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಸಾಧು ವೀರಶೈವ ಲಿಂಗಾಯತ ಸಮಾಜದ ನ್ಯಾಮತಿ ತಾಲ್ಲೂಕು ಘಟಕದ ಅಧ್ಯಕ್ಷ ಶಿವಪ್ಪ ಕೋಡಿಕೊಪ್ಪ, ಹೊನ್ನಾಳಿ ತಾಲ್ಲೂಕು ಘಟಕದ ಅಧ್ಯಕ್ಷ ಹೆಚ್.ಸಿ.ಗದಿಗೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ. ವಿಶ್ವನಾಥ, ತಾ.ಪಂ. ಮಾಜಿ ಅಧ್ಯಕ್ಷ ಡಿ.ಜಿ. ರಾಜಪ್ಪ, ಮಾಜಿ ಸದಸ್ಯ ಸಿ.ಎಲ್. ಸತೀಶ್, ಚೀಲೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪ, ಚೀಲೂರು ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯ ಜೀರ್ಣೋದ್ಧಾರ ಸಮಿತಿಯ ಕೆ.ಪಿ. ರವಿಕುಮಾರ್ ಗೌಡ್ರು, ಚೀಲೂರು ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ದಾರ ಸಮಿತಿಯ ಯತೀಶ್ ಚಂದ್ರ ಕೋರಿ, ಮುಖಂಡರಾದ ಹೆಚ್. ಶಿವಪ್ಪ ಮತ್ತಿತರರು ಭಾಗವಹಿಸಲಿದ್ದಾರೆ.

ಉಪನ್ಯಾಸಕ ಎಂ.ಎನ್. ವಿನಾಯಕ ಉಪನ್ಯಾಸ ನೀಡುವರು. ಚೀಲೂರು ಗ್ರಾಮದ ಜಿ. ಚಂದ್ರಶೇಖರ ಗೌಡ್ರು ಅಧ್ಯಕ್ಷತೆ ವಹಿಸಲಿದ್ದಾರೆ.

error: Content is protected !!