ಹೊನ್ನಾಳಿ, ಏ. 10- ಸೂರ್ಯ ಚಂದ್ರರಿರುವುದು ಎಷ್ಟು ಸತ್ಯವೋ ಮೋದಿ 3ನೇ ಬಾರಿ ಪ್ರಧಾನಿಯಾಗುವುದು ಅಷ್ಟೇ ಸತ್ಯ ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಭರವಸೆ ವ್ಯಕ್ತಪಡಿಸಿದರು.
ಇಲ್ಲಿನ ಬಿಜೆಪಿ ಲೋಕಸಭಾ ಚುನಾವಣಾ ಕಾರ್ಯಾಲಯದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ಬಾರಿಯ ಚುನಾವಣೆ ದೇಶದ ಮತ್ತು ನಮ್ಮೆಲ್ಲರ ಭವಿಷ್ಯದ ಚುನಾವಣೆಯಾಗಿದ್ದು, ದೇಶ ಮತ್ತು ರಾಜ್ಯದ ಪ್ರಜ್ಞಾವಂತ ಮತದಾರರು ಮತ್ತೊಮ್ಮೆ ಬಿಜೆಪಿಗೆ ಮತ ಹಾಕಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್ ಮಾತನಾಡಿ, ಹೊನ್ನಾಳಿ-ಶಿವಮೊಗ್ಗ ರಸ್ತೆಯ ಟಿ.ಬಿ. ವೃತ್ತದ ಬಲಭಾಗದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ನೂತನ ಕಾರ್ಯಾಲಯದ ಉದ್ಘಾಟನೆ ಇದೇ ದಿನಾಂಕ 11ರ ಗುರುವಾರ ಬೆಳಿಗ್ಗೆ ನಡೆಯಲಿದ್ದು, ಮಧ್ಯಾಹ್ನ ನೂತನ ಕಾರ್ಯಾಲಯದ ಪಕ್ಕದಲ್ಲೇ ಪಕ್ಷದ ಅಭ್ಯರ್ಥಿಯ ಪರ ಚುನಾವಣಾ ಪ್ರಚಾರ ಸಭೆ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ಲೋಕಸಭಾ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಸಂಸದ ಜಿ.ಎಂ.ಸಿದ್ದೇಶ್ವರ, ಜಿಲ್ಲಾ ಚುನಾವಣಾ ಉಸ್ತುವಾರಿ ಎಸ್.ಎ.ರವೀಂದ್ರನಾಥ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಶೇಖರ್ ಮತ್ತಿತರ ಮುಖಂಡರುಗಳು ಆಗಮಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರುಗಳಾದ ಕೆ.ಪಿ.ಕುಬೇರಪ್ಪ, ಡಿ.ಜಿ.ರಾಜಪ್ಪ, ಧರ್ಮಪ್ಪ, ಅರಕೆರೆ ನಾಗರಾಜ್, ಸುರೇಂದ್ರನಾಯ್ಕ್, ಇಂಚರ ಮಂಜುನಾಥ್, ಮಹೇಶ್ ಹುಡೇದ್, ಸಿ.ಆರ್.ಶಿವಾನಂದ್, ಬಾಬು ಹೋಬಳಿದಾರ್, ಮಾರುತಿ ನಾಯ್ಕ್, ದಿಡಗೂರು ಪಾಲಾಕ್ಷಪ್ಪ, ನೆಲಹೊನ್ನೆ ಮಂಜುನಾಥ್, ರಂಗನಾಥ್, ಕೆ.ವಿ.ಶ್ರೀಧರ್, ಎಂ.ಎಸ್.ಪಾಲಾಕ್ಷಪ್ಪ, ಬೀರಗೊಂಡನಹಳ್ಳಿ ಬಸವರಾಜ್, ದೊಡ್ಡೇರಿ ಗಿರೀಶ್, ಕೋಡಿಕೊಪ್ಪ ರವಿ, ಕೊನಾಯ್ಕನಹಳ್ಳಿ ಮಂಜು,ಬಲಮುರಿ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.