ದವನ್‌ ಕಾಲೇಜಿನ ಖುಷ್ಬು ರಾಜ್‌ಪುರೋಹಿತ್ ಕಾಮರ್ಸ್‌ನಲ್ಲಿ ಜಿಲ್ಲಾ ತೃತೀಯ ಟಾಪರ್

ದವನ್‌ ಕಾಲೇಜಿನ ಖುಷ್ಬು ರಾಜ್‌ಪುರೋಹಿತ್ ಕಾಮರ್ಸ್‌ನಲ್ಲಿ ಜಿಲ್ಲಾ ತೃತೀಯ ಟಾಪರ್

ದಾವಣಗೆರೆ, ಏ. 10 – 2023-24 ನೇ ಶೈಕ್ಷಣಿಕ ಸಾಲಿನ ಪಿಯು ಫಲಿತಾಂಶದಲ್ಲಿ ದವನ್ ಪಿಯು ಕಾಲೇಜಿಗೆ ಶೇ.94.33% ಫಲಿತಾಂಶದೊಂದಿಗೆ 57 ವಿದ್ಯಾರ್ಥಿಗಳು 85% ಕ್ಕೂ ಹೆಚ್ಚು ಫಲಿತಾಂಶ ಪಡೆದಿರುತ್ತಾರೆ.

ಖುಷ್ಬು ರಾಜ್‌ಪುರೋಹಿತ್ ಕಾಮರ್ಸ್‌ನಲ್ಲಿ 585 (97.50%) ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಐಶ್ವರ್ಯ ಎಫ್ ಗೊಲ್ಲರ್ ಹಾಗೂ ಸಾಕ್ಷಿ ಪಿ. ಜೈನ್‌ ಅವರುಗಳು 584 (97.33%) ಅಂಕಗಳನ್ನು ಪಡೆದು ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಹೆಚ್‌.ಸಿ. ಪ್ರೀತಿ 582 (97%) ಅಂಕಗಳೊಂದಿಗೆ ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾರೆ.

ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಗೌರವ ಕಾರ್ಯದರ್ಶಿ ವೀರೇಶ್ ಪಟೇಲ್, ಜಂಟಿ ಕಾರ್ಯದರ್ಶಿ ಡಾ. ಅಂಜು ಜಿ.ಎಸ್. ನಿರ್ದೇಶಕ ಹರ್ಷರಾಜ್ ಎ ಗುಜ್ಜರ್, ಶೈಕ್ಷಣಿಕ ಸಲಹೆಗಾರರಾದ ಪ್ರೊ. ಬಾತಿ ಬಸವರಾಜ್, ಪ್ರಾಚಾರ್ಯರಾದ ಶ್ರೀಮತಿ ಅಶ್ವಿನಿ ಹೆಚ್.ಸಿ. ಅಭಿನಂದಿಸಿದ್ದಾರೆ.

error: Content is protected !!