ದಾವಣಗೆರೆ, ಏ.10- ನಗರದ ವಿದ್ಯಾಚೇತನ ಮತ್ತು ವಿಶ್ವಚೇತನ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅದ್ವಿತೀಯ ಫಲಿತಾಂಶ ದಾಖಲಾಗಿದೆ. ವಿಶ್ವಚೇತನ ವಿದ್ಯಾನಿಕೇತನ ಕಾಲೇಜು 100ಕ್ಕೆ 100ರಷ್ಟು ಫಲಿತಾಂಶ ಪಡೆದು, ಕಾಲೇಜಿನ ಕುಮಾರಿ ಸೃಷ್ಟಿ ಬಿ.ಕೊಳಾಳ್ 600ಕ್ಕೆ 592 ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಜೊತೆಗೆ ಅನೇಕ ವಿದ್ಯಾರ್ಥಿಗಳು ವಿಷಯವಾರು 100 ಕ್ಕೆ 100 ರಷ್ಟು ಅಂಕಗಳನ್ನು ಗಳಿಸಿದ್ದಾರೆ. ಸುಮಾರು ಶೇ.80 ರಷ್ಟು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಅಂಕಗಳನ್ನು ಪಡೆದು ಉತ್ತಿರ್ಣರಾಗಿದ್ದಾರೆ. ಇನ್ನೂ ಅನೇಕ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳನ್ನು ಕಾರ್ಯದರ್ಶಿ ಡಾ|| ವಿಜಯಲಕ್ಷ್ಮಿ ವೀರಮಾಚನೇನಿ ಅವರು ಅಭಿನಂದಿಸಿದ್ದಾರೆ.
December 22, 2024