ಸುತ್ತೂರು ಶ್ರೀಮಠ, ಜೆಎಸ್‌ಎಸ್ ಮಹಾವಿದ್ಯಾಪೀಠ ಹಾಗೂ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಗಳ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 1ರಿಂದ ಮೇ 24ರವರೆಗೆ 10 ಶಿಬಿರಗಳನ್ನು ಏರ್ಪಡಿಸಲಾಗಿದೆ. ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಶಿಬಿರಗಳು ನಡೆಯಲಿವೆ.
ಮೈಸೂರಿನಲ್ಲಿ ಮಕ್ಕಳಿಗಾಗಿ ಎಳೆಯರ ಮೇಳ, ಚಿತ್ರಕಲಾ ಶಿಬಿರ, ಶ್ರೀ ಸುತ್ತೂರು ಕ್ಷೇತ್ರದಲ್ಲಿ ಪಬ್ಲಿಕ್ ಶಾಲಾ ಶಿಕ್ಷಕರು, ಆಯುರ್ವೇದ, ವಾಕ್-ಶ್ರವಣ ಸಂಸ್ಥೆ, ನರ್ಸಿಂಗ್ ವಿದ್ಯಾರ್ಥಿಗಳು, ತಾಂತ್ರಿಕ ವಿದ್ಯಾರ್ಥಿಗಳು, ಕೃಷಿವಿಜ್ಞಾನ ಕೇಂದ್ರದಲ್ಲಿ ಚಿಣ್ಣರು (ಕೃಷಿ ಪಾಠ-ದೇಸಿ ಆಟ), ವೈದ್ಯಕೀಯ-ಸ್ನಾತಕೋತ್ತರ, ಮತ್ತು ದಂತವೈದ್ಯ-ಹೌಸ್ ಸರ್ಜನ್‌ಗಳು, ಸಾರ್ವಜನಿಕರಿಗಾಗಿ ಊಟಿ ಮತ್ತು ಬಿಳಿಗಿರಿ ರಂಗನಬೆಟ್ಟದಲ್ಲಿ ಜೀವನೋತ್ಸಾಹ ಶಿಬಿರಗಳು ಹಾಗೂ ಮಠಾಧಿಪತಿಗಳು, ಸಾಧಕರು ಮತ್ತು ಆಧ್ಯಾತ್ಮಿಕ ಜಿಜ್ಞಾಸುಗಳಿಗಾಗಿ ಅಧ್ಯಯನ ಶಿಬಿರಗಳನ್ನು ಆಯೋಜಿಸಲಾಗಿದೆ.
ಶಿಬಿರಗಳಲ್ಲಿ ಪ್ರತಿನಿತ್ಯ ಸಾಮೂಹಿಕ ಪ್ರಾರ್ಥನೆ, ಯೋಗ, ವಿಶೇಷ ಉಪನ್ಯಾಸ, ಧಾರ್ಮಿಕ ಚಿಂತನ-ಮಂಥನ, ದೇಸಿ ಆಟಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ.
ಶಿಬಿರದಲ್ಲಿ ಭಾಗವಹಿಸಲು ಇಚ್ಛೆಯುಳ್ಳವರು ಮೈಸೂರಿನ ಜೆಎಸ್ಎಸ್ ಮಹಾವಿದ್ಯಾಪೀಠದ ಪ್ರಕಟಣ ವಿಭಾಗದಲ್ಲಿ ನೇರವಾಗಿ ಅಥವಾ ಶ್ರೀ ಬಿ. ರಾಜೇಶ್‌ರವರನ್ನು 0821-2548212, 223/224 ದೂರವಾಣಿ ಅಥವಾ 9964141560 ಸಂಚಾರಿ ದೂರವಾಣಿಯಲ್ಲಿ ಸಂಪರ್ಕಿಸಿ ಶಿಬಿರದ ಸಂಚಾಲಕರು ಗಳ ವಿವರ ಪಡೆದು ನೋಂದಾಯಿಸಿಕೊಳ್ಳಬಹುದಾಗಿದೆ. www.jssonline.org ಯಿಂದ ವಿವರ ಪಡೆಯ ಬಹುದು. ಇ-ಮೇಲ್: jsspublications@gmail .com ಮೂಲಕವೂ ನೋಂದಾಯಿಕೊಳ್ಳಬಹುದು.