ದಾವಣಗೆರೆ, ಮಾ. 5 – ಶ್ರೀ ಶಂಕರ ಸೇವಾ ಸಂಘದ ವತಿಯಿಂದ ಪ್ರತಿ ವರ್ಷ ಶ್ರೀ ಶಂಕರ ಜಯಂತಿಯಂದು ನಡೆಯುತ್ತಿದ್ದ ಸಾಮೂಹಿಕ ಧರ್ಮೋಪನಯನವನ್ನು ಗುರು ಅಸ್ತ್ರ ಇರುವ ಕಾರಣ ಏ. 15ರ ಸೋಮವಾರ ನಡೆಸಲು ತೀರ್ಮಾನಿಸಲಾಗಿದೆ.
ಆಸಕ್ತ ತ್ರಿಮತಸ್ಥ ವಿಪ್ರ ಬಾಂಧವರು ಏ. 10ರೊಳಗೆ ದೇವಸ್ಥಾನದ ಮ್ಯಾನೇಜರ್ ಅಥವಾ ಕಾರ್ಯದರ್ಶಿ ಮೊ: 08192-221680, 82964 08068 ಮತ್ತು 94480 43569 ಸಂಪರ್ಕಿಸಿ ಹೆಸರು ನೋಂದಣಿ ಮಾಡಿಕೊಳ್ಳುವಂತೆ ಕಾರ್ಯದರ್ಶಿ ಶ್ರೀನಿವಾಸ ಕೆ. ಜೋಷಿ ತಿಳಿಸಿದ್ದಾರೆ.