ದಾವಣಗೆರೆ,ಏ.5- ಜೆ.ಎಚ್.ಪಟೇಲ್ ಬಡಾವಣೆಯ ಶ್ರೀ ಹೇಮರೆಡ್ಡಿ ಮಲ್ಲಮ್ಮ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಶ್ರೀ ಶಬರಿ ಮಹಿಳಾ ಸಂಘದಿಂದ ರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸಂಘದ 6ನೇ ವಾರ್ಷಿಕೋತ್ಸವ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆಂಜನೇಯ ಬಡಾವಣೆ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ಕುಸುಮಾ ಲೋಕೇಶ್ ಮಾತನಾಡಿ, ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲಿ ಅಂದರೆ, ಭೂಮಿಯಿಂದ ಬಾನಿನವರೆಗೂ, ಅಂಗಳದಿಂದ ಮಂಗಳದವರೆಗೂ ಪಾದಾರ್ಪಣೆ ಮಾಡಿ ದ್ದಾಳೆ ಎಂದು ಹೇಳಿದರು. ಹೆಣ್ಣುಮಕ್ಕಳು ಒಬ್ಬರನ್ನೊಬ್ಬರು ಗೌರವಿಸಬೇಕು ಎಂದು ಅವರು ಸಲಹೆ ನೀಡಿದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ವಸಂತ ಚಂದ್ರಣ್ಣ ವಹಿಸಿದ್ದರು. ಪ್ರವೀಣ ಚಂದ್ರಶೇಖರ್ ಮತ್ತು ವಿಜಯ ವೀರೇಂದ್ರ ನಿರೂಪಣೆ ಮಾಡಿದರು. ಕಲ್ಪನಾ ಹಿರೇಮಠ ಪ್ರಾರ್ಥಿಸಿದರು.ಶಿವಗಂಗಾ ಬಸವರಾಜ್ ಸ್ವಾಗತಿಸಿದರು.ಸಂಘದ ಗೌರವ ಅಧ್ಯಕ್ಷರಾದ ಪುಷ್ಪ ಅಜಯ್ ಸಂಘದ ಬಜೆಟ್ ಮಂಡಿಸಿದರು.