ದಾವಣಗೆರೆ, ಏ.4- ಬೆಂಗಳೂರಿನ ರಿಸರ್ವ್ ಬ್ಯಾಂಕ್ ಕಾಲೋನಿಯಲ್ಲಿ ಕಳೆದ ವಾರ ನಡೆದ ರಾಜ್ಯ ಮಟ್ಟದ ಕೇರಂ ರಾಂಕಿಂಗ್ ಪಂದ್ಯಾವಳಿಯಲ್ಲಿ ನಗರದ ಜಿಲ್ಲಾ ಕೇರಂ ಅಸೋಸಿಯೇಷನ್‌ನ ಆರ್. ಶಿವಕುಮಾರ್ ಅವರು ತೃತೀಯ ಸ್ಥಾನ ಮತ್ತು ಸೈಯದ್ ನೂರುಲ್ಲಾ ಅವರು ನಾನ್ ಮೆಡಿಲಿಸ್ಟ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಾಡಿದ್ದು ದಿನಾಂಕ 6ರಿಂದ 10ರ ವರೆಗೆ ನಡೆಯುವ ರಾಷ್ಟ್ರಮಟ್ಟದ ಸೀನಿಯರ್ ರಾಂಕಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಇವರು ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.