ದಾವಣಗೆರೆ, ಏ.4- ಸಾಧಿಸುವ ವ್ಯಕ್ತಿಗೆ ಗುರುವಿನ ಪಾತ್ರ ಬಹಳ ಮುಖ್ಯವಾಗಿದೆ. ಜತೆಗೆ ಗುರುವಿನ ಸ್ಪರ್ಶ ಕಂಡ ಶಿಷ್ಯನ ಜೀವನ ಯಶಸ್ವಿಯಾಗಲಿದೆ ಎಂದು ಈಗಲ್ ಫಿಟ್ನೆಸ್‌ನ ವೆಂಕಟೇಶ್ ತಿಳಿಸಿದರು.
ಸಿದ್ದಲಿಂಗೇಶ್ವರ ವಿದ್ಯಾ ಸಂಸ್ಥೆಯ ಸಂಯುಕ್ತಾಶ್ರ ಯದಲ್ಲಿ ಶ್ರೀಗುರು ಪಂಚಾಕ್ಷರಿ ಗವಾಯಿ ಮೆಮೋರಿಯಲ್ ಕಾಂಪೋಸಿಟ್ ಶಾಲೆಯಲ್ಲಿ ಶಾರದಾ ಪೂಜೆ, 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ, ಯುಕೆಜಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಗುರುವಿನ ಮಾರ್ಗ ದರ್ಶನದಿಂದ ಮಗುವಿನ ಭವಿಷ್ಯ ಉಜ್ವಲ ವಾಗುತ್ತದೆ. ಆದ್ದರಿಂದ ಜೀವನದ ಪ್ರತಿ ಕಾಲಘ ಟ್ಟದಲ್ಲೂ ಗುರುವಿನ ಅವಶ್ಯಕತೆ ಅಗತ್ಯವಾಗಿ ಬೇಕು ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ರಾದ ಲಕ್ಷ್ಮಿ ಛಾಯಾ ಮಾ ತನಾಡಿ, ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ನಿಮ್ಮ ಸಾಧನೆಗೆ ಕಾರಣರಾದ ಗುರುಗಳನ್ನು ಸದಾ ಸ್ಮರಿಸಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಸಿದ್ದಲಿಂಗೇಶ್ವರ ವಿದ್ಯಾಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಎ.ಎಚ್. ಸುಗ್ಗಲಾದೇವಿ ಮಾತನಾಡಿ, ಮಕ್ಕಳು ತಪ್ಪು ದಾರಿ ತುಳಿಯದೇ ಉತ್ತಮ ನಡತೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದರು.
ಶಿಕ್ಷಕಿ ಪೂಜಾ ಸ್ವಾಗತಿಸಿದರು. ಡಿ. ಅನಿತಾ ವಂದನಾರ್ಪಣೆ ಮಾಡಿದರು. ಶ್ರೀದೇವಿ ನಿರೂಪಿಸಿದರು. ಪಾಲಕರು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.