ಫೈಜ್ನಟ್ರಾಜ್ ಅವರಿಗೆ ಪ್ರಶಸ್ತಿ ಪ್ರದಾನ

ಫೈಜ್ನಟ್ರಾಜ್ ಅವರಿಗೆ ಪ್ರಶಸ್ತಿ ಪ್ರದಾನ

ದಾವಣಗೆರೆ, ಏ. 4- ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆ ಪ್ರತಿ ವರ್ಷ ಕೊಡಮಾಡುವ ಪುಸ್ತಕ ಪ್ರಶಸ್ತಿ ಗೆ ಕನ್ನಡದ ಕವಿ ಸಾಹಿತಿ ಸಂತೆಬೆನ್ನೂರು ಫೈಜ್ನಟ್ರಾಜ್ ಭಾಜನರಾಗಿದ್ದಾರೆ.

ಇವರು ಬರೆದ ಮಕ್ಕಳ ಸಾಹಿತ್ಯದ ‘ ಮಗಳಿಗೆ ಹೇಳಿದ ಕಥೆಗಳು’  ಕೃತಿ ಈ ಪ್ರಶಸ್ತಿ ಪಡೆದುಕೊಂಡಿದೆ ಎಂದು ಸಂಘದ ಸಂಚಾಲಕಿ, ಲೇಖಕಿ ಶೈಲಜಾ ಸುರೇಶ್ ತಿಳಿಸಿದ್ದಾರೆ.

ಬೆಂಗಳೂರಿನ ಎನ್.ಆರ್. ಕಾಲೋನಿಯಲ್ಲಿರುವ ಕನ್ನಡ ಕಣ್ವ ಬಿ.ಎಂ.ಶ್ರೀ ಕಲಾಭವನದಲ್ಲಿ ನಡೆದ ಪುಸ್ತಕ ಪ್ರಶಸ್ತಿ ಸಮಾರಂಭದಲ್ಲಿ ಫೈಜ್ನಟ್ರಾಜ್ ಅವರಿಗೆ `ಮಂಗಳಾ ರಾಮಚಂದ್ರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಭೈರಮಂಗಲ ರಾಮೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಡಾ. ಶಾಂತರಾಜು, ಸಂಚಾಲಕಿ ಶೈಲಜಾ ಸುರೇಶ್, ಕಥೆಗಾರ್ತಿ ಮಧುರಾ ಕರ್ಣಂ, ಪ್ರಾಯೋಜಕರಾದ ಶಾಂತ ಜಯಾನಂದ ಮುಂತಾದ ಗಣ್ಯರ ಮುಂದೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಕೃತಿಗೆ ಇತ್ತೀಚೆಗಷ್ಟೇ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ದತ್ತಿ ಪ್ರಶಸ್ತಿ ಲಭ್ಯವಾಗಿತ್ತು.

error: Content is protected !!