ಹರಿಹರ ನದಿಗೆ ಹರಿದು ಬಂದ ಭದ್ರೆ ನೀರು

ಹರಿಹರ ನದಿಗೆ ಹರಿದು ಬಂದ ಭದ್ರೆ ನೀರು

ಜನತೆಗೆ  ಕುಡಿವ ನೀರಿಗೆ ತೊಂದರೆ ಆಗದು.

– ಪೌರಾಯುಕ್ತ ಬಸವರಾಜ್ 

ಹರಿಹರ, ಏ.3- ಮುಂದಿನ ದಿನಗಳಲ್ಲಿ ನಗರದ ಜನತೆಗೆ ಕುಡಿಯುವ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳ ಲಾಗುವುದು ಎಂದು ಪೌರಾಯುಕ್ತ ಐಗೂರು ಬಸವರಾಜ್ ತಿಳಿಸಿದರು.

ತುಂಗಭದ್ರಾ ನದಿಯಲ್ಲಿ ಡ್ಯಾಂನಿಂದ ಬಿಟ್ಟಿರುವ ನೀರು ಹರಿಯತ್ತಿದ್ದು, ನದಿಯಲ್ಲಿ ಮರಳಿನ ಚೀಲಗಳನ್ನಿಟ್ಟು ನೀರು ಶೇಖರಣೆ ಮಾಡುವುದಕ್ಕೆ ಜಿಲ್ಲಾಧಿಕಾರಿಗಳು   ಅನುಮತಿ ನೀಡಿದ್ದಾರೆ. ಶನಿವಾರದ ನಂತರ ನೀರು ಸಂಗ್ರಹಣೆ ಮಾಡುವುದಾಗಿ  ತಿಳಿಸಿದರು.

ನಗರಸಭೆ ಆವರಣದಲ್ಲಿ ಮಾತ ನಾಡಿದ ಪೌರಾಯುಕ್ತರು, ಬೇಸಿಗೆಯಲ್ಲಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಆಗಿದ್ದರಿಂದ, ಕಳೆದ ಎರಡು ತಿಂಗಳಲ್ಲಿ ಹರಿಹರ ಜನತೆಗೆ ಕುಡಿಯುವ ನೀರು ಸರಬರಾಜು ಸರಿಯಾದ ರೀತಿ ಯಲ್ಲಿ ಆಗದೇ ಇದ್ದ ಪರಿಣಾಮ ಎಲ್ಲಾ ವಾರ್ಡಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನಿಭಾಯಿಸು ವುದೇ ಒಂದು ದೊಡ್ಡ ಸವಾಲಾ ಗಿತ್ತು. ಆದಾಗ್ಯೂ ಸಹ ನಮ್ಮ ಇಲಾಖೆ ಜೊತೆಗೆ ಜಲಸಿರಿ ಇಲಾಖೆ ಅಧಿಕಾರಿಗಳು ಮತ್ತು ನಗರಸಭೆ ಸಿಬ್ಬಂದಿಗಳು ಜೊತೆಗೆ ಪ್ರತಿಯೊಂದು ವಾರ್ಡಿನ ಸದ ಸ್ಯರು,  ಹಗಲು ರಾತ್ರಿ ಎನ್ನದೇ ಬೋರ್  ನೀರು ಸರಬರಾಜು ಮಾಡುವಲ್ಲಿ ಶ್ರಮಿಸಿದ್ದಾರೆ.  

ಈಗ ಶೇಖರಣಾ ಕೇಂದ್ರದಿಂದ ತುಂಗ ಭದ್ರಾ ನದಿಗೆ  ನೀರು ಹರಿದು ಬಂದಿದ್ದು,  ಸಾರ್ವಜನಿಕರು ನೀರನ್ನು  ಕಾಯಿಸಿ ಆರಿಸಿ ಕುಡಿಯಬೇಕು  ಎಂದು ಹೇಳಿದರು.

ನಗರದ ಜನತೆಗೆ ಬೇಸಿಗೆ ಯಲ್ಲಿ ನೀರಿನ ಕೊರತೆ ಬರದಂತೆ ತಡೆಯಲು   ಮೊನ್ನೆ ನಡೆದ ನಗರಸಭೆ ವಾರ್ಷಿಕ ಬಜೆಟ್ ಮಂಡನೆ ಸಮಯ ದಲ್ಲಿ ನಗರದ ಯಾವುದೇ ಭಾಗದಲ್ಲಿ ಜಮೀನನ್ನು ಖರೀದಿಸಿ, ಆ ಸ್ಥಳದಲ್ಲಿ ನೀರು ಶೇಖರಣಾ ಘಟಕ ಸ್ಥಾಪಿಸುವುದಕ್ಕೆ  ಸದಸ್ಯರು ಸಹಮತ ವ್ಯಕ್ತಪಡಿಸಿದ್ದು ಅದನ್ನು  ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್  ಹಾಗೂ  ಶಾಸಕರಾದ ಬಿ.ಪಿ. ಹರೀಶ್ ರವರ ಗಮನಕ್ಕೆ ತಂದಿದ್ದು, ಅವರು ಕೂಡಾ   ಸಹಮತ ವ್ಯಕ್ತಪಡಿಸಿ, ಸರ್ಕಾರದ ಗಮನಕ್ಕೆ ತರುವ ಮೂಲಕ  ನೀರು ಶೇಖರಣಾ ಘಟಕ ಸ್ಥಾಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡೊಣ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ನದಿಗೆ ಹರಿದು ಬಂದಿರುವ ನೀರು ಬಹುತೇಕ, ಇನ್ನೂ ಒಂದು ತಿಂಗಳ ಕಾಲ ನಗರದ ಜನತೆಗೆ ನೀರು ಸರಬರಾಜು ಮಾಡಬಹುದು. ತದ ನಂತರ 27 ಕೆರೆಗೆ ಹೋಗುವ ನೀರು ಶೇಖರಣ ಘಟಕದಲ್ಲಿ ಸಂಗ್ರಹಿಸಿದ ನೀರು ಸಹ, ಇಲ್ಲಿನ ಜನತೆಗೆ ಒಂದು ಗೇಟ್ ಮೂಲಕ ಕೆಲವು ದಿನಗಳ ಕಾಲ ನೀರು ಸರಬರಾಜು ಮಾಡಲು ಅವಕಾಶ ಇರುವುದರಿಂದ ಅಲ್ಲಿ ಶೇಖರಣೆ ಗೊಂಡಿರುವ ನೀರು ನಗರದ ಜನತೆಯ ನೀರಿನ ಬವಣೆ ನೀಗಿಸಲು ಸಾಧ್ಯವಾಗುತ್ತದೆ.  ಅಷ್ಟರಲ್ಲಿ ಮಳೆ ಬಿದ್ದರೆ ನಗರದ ಜನತೆಗೆ ಯಾವುದೇ ರೀತಿಯ ನೀರಿನ ಸಮಸ್ಯೆಗಳು ಬರದಂತೆ ಆಗುತ್ತದೆ ಎಂದು ಪೌರಾಯುಕ್ತ ಬಸವರಾಜ್ ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಎ.ಬಿ. ವಿಜಯಕುಮಾರ್, ಹನುಮಂತಪ್ಪ ಇತರರು ಹಾಜರಿದ್ದರು.

error: Content is protected !!