ರಾಜನಹಳ್ಳಿ, ಏ. 3- ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಥಮ ಪೀಠಾಧಿಪತಿಗಳಾದ ಶ್ರೀ ಪುಣ್ಯಾನಂದ ಪುರಿ ಮಹಾಸ್ವಾಮೀಜಿಯವರ 17ನೇ ವರ್ಷದ ಪುಣ್ಯಾರಾಧನೆ ಪ್ರಯುಕ್ತ ಬುಧವಾರ ಶ್ರೀ ಮಠದಲ್ಲಿರುವ ಶ್ರೀಗಳ ಗದ್ದುಗೆಗೆ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರು ಲಿಂಗೈಕ್ಯ ಶ್ರೀಗಳ ಗದ್ದುಗೆಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಲಿಂ ಪುಣ್ಯಾನಂದಪುರಿ ಸ್ವಾಮೀಜಿಯವರ ಮಾತೃಶ್ರೀ ಶ್ರೀಮತಿ ಮಹದೇವಮ್ಮ ಮತ್ತು ಕುಟುಂಬಸ್ಥರನ್ನು ಶ್ರೀಗಳು ಗೌರವಿಸಿದರು. ಶಾಸಕ ಬಿ.ಪಿ ಹರೀಶ್, ಮಠದ ಧರ್ಮದಶಿ೯ ಕೆ.ಬಿ. ಮಂಜುನಾಥ್, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಜಿಗಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ. ಎಂ. ದೇವೇಂದ್ರಪ್ಪ, ಬೆಣ್ಣೇರ ನಂದ್ಯಪ್ಪ, ಹರಿಹರ ನಗರಸಭೆ ಸದಸ್ಯ ದಿನೇಶ್ ಬಾಬು, ಮಕರಿ ಪಾಲಾಕ್ಷಪ್ಪ, ಪಾರ್ವತಿ ಬೋರಯ್ಯ, ಗೌರಮ್ಮ ಮಂಜುನಾಥ್, ಶಿಕ್ಷಕ ವಾಸನ ಮಹಾಂತೇಶ್, ಮಠದ ವ್ಯವಸ್ಥಾಪಕ ರಾಜನಹಳ್ಳಿ ಭೀಮಣ್ಣ, ಪತ್ರಕರ್ತ ಜಿಗಳಿ ಪ್ರಕಾಶ್, ಯುವ ಬರಹಗಾರ ನಟರಾಜ್ ಸೇರಿದಂತೆ ಇತರರು ಭಾಗವಹಿಸಿದ್ದರು.