ದಾವಣಗೆರೆ. ಏ1- ನಗರದ ಶಿವಕುಮಾರ್ ಬಡಾವಣೆಯ 2ನೇ ತಿರುವಿನ ರಸ್ತೆಯನ್ನು ಒಮ್ಮುಖ ರಸ್ತೆ ಮಾಡುವಂತೆ ಈಶ್ವರ ವಿನಾಯಕ ಟ್ರಸ್ಟಿನ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಈ ಬಡಾವಣೆಯ 2ನೇ ಕ್ರಾಸಿನ ಮೋರ್ ಮತ್ತು ಸರ್‌ಎಂವಿ ಕಾಲೇಜು ರಸ್ತೆಯಲ್ಲಿ ಸಂಚಾರ ದಟ್ಟನೆ ಹೆಚ್ಚಾಗಿದ್ದರಿಂದ ಜನಸಾಮಾನ್ಯರು ಓಡಾಡಲು ತೊಂದರೆಯಾಗುತ್ತಿದೆ. ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು, ಬ್ಯಾಂಕ್, ಅಪೊಲೊ ಮೆಡಿಕಲ್ ಹಾಗೂ ಟೀ ಅಂಗಡಿಗಳಿಗೆ ಬರುವ ಜನರು ರೋಡ್‌ನಲ್ಲಿಯೇ ವಾಹನ ನಿಲ್ಲಿಸಿ ಹೋಗುವುದರಿಂದ ಅಲ್ಲಿ ಓಡಾಡುವ ಸ್ಥಳೀಯರಿಗೆ ಕಷ್ಟವಾಗುತ್ತಿದೆ.
ಸಂಬಂಧಿಸಿದ ಅಧಿಕಾರಿಗಳು ಮತ್ತು ಪ್ರಾದೇ ಶಿಕ ಸಾರಿಗೆ ಅಧಿಕಾರಿಗಳು ಇದನ್ನು ಒಮ್ಮುಖ ರಸ್ತೆ ಮಾಡ ಬೇಕೆೆಂದು ಬಡಾವಣೆ ನಿವಾಸಿಗಳು ಮತ್ತು ಟ್ರಸ್ಟಿನ ಸದಸ್ಯರು ಆಗ್ರಹಿಸಿದ್ದಾರೆ.