ಅಧಿಕಾರದಾಸೆ ಮುಗಿದಿದೆ, ಜನರಿಗಾಗಿ ಕಾಂಗ್ರೆಸ್ ಸೇರ್ಪಡೆ : ಆರ್. ಶಂಕರ್

ಅಧಿಕಾರದಾಸೆ ಮುಗಿದಿದೆ, ಜನರಿಗಾಗಿ ಕಾಂಗ್ರೆಸ್ ಸೇರ್ಪಡೆ : ಆರ್. ಶಂಕರ್

ರಾಣೇಬೆನ್ನೂರು, ಮಾ. 31 – ಶಾಸಕ, ಸಚಿವನಾಗಿದ್ದೆ, ಮೇಲ್ಮನೆ ಸದಸ್ಯನಾಗಿದ್ದೆ, ನನಗೀಗ ಯಾವುದೇ ಆಧಿಕಾರದ ಆಸೆ ಇಲ್ಲಾ, ನನ್ನನ್ನು ಶಾಸಕ ನನ್ನಾಗಿ ಮಾಡಿದ ಜನರಿಗೆ ಯಾವುದೇ ಅನ್ಯಾಯವಾಗಬಾರದು. ನನ್ನ ಕಷ್ಟ ಕಾಲದಲ್ಲೂ ನನ್ನ ಜೊತೆಗಿರುವ ಜನರಿಗಾಗಿ ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆ ಎಂದು ಮಾಜಿ ಸಚಿವ ಆರ್. ಶಂಕರ್ ಹೇಳಿದರು. 

ಅವರಿಂದು ತಮ್ಮ ನಿವಾಸದಲ್ಲಿ ನಡೆಸಿದ ತಮ್ಮ ಅಭಿಮಾನಿಗಳ ಸಭೆ ನಂತರ ಪತ್ರಿಕೆಗಳಿಗೆ ಹೇಳಿಕೆ ನೀಡಿದರು.

ಕಾಂಗ್ರೆಸ್ ಪಕ್ಷ ನನ್ನನ್ನು ಉಪಮಹಾಪೌರ, ಸಚಿವನನ್ನಾಗಿ ಮಾಡಿದೆ. ನನ್ನ ಮನಸ್ಸು ಕಾಂಗ್ರೆಸ್ ನತ್ತ ಎಳೆಯುತ್ತಲಿತ್ತು. ಈಗ ನನ್ನ ಜನರು ಸಹ ಕಾಂಗ್ರೆಸ್ ಸೇರುವಂತೆ ಹೇಳಿದ್ದಾರೆ. ನಾನು ಯಾವುದೇ ಕರಾರುಗಳಿಲ್ಲದೇ ಕಾಂಗ್ರೆಸ್ ಸೇರುತ್ತೇನೆ. ಹಿರಿಯರಾದ ಕೆ.ಬಿ. ಕೋಳಿವಾಡ ಮತ್ತು ನನ್ನ ಮಧ್ಯೆ ಭಿನ್ನಾಭಿಪ್ರಾಯವಿತ್ತು ಬೇರೆಯಾಗಿದ್ದೆವು. ಈಗ ಒಂದೇ ಮನೆಯಲ್ಲಿರುತ್ತೇವೆ, ಹೊಂದಾಣಿಕೆಯಿಂದ ಜನರ ಕೆಲಸ ಮಾಡುತ್ತೇವೆ ಎಂದು ಶಂಕರ್ ಹೇಳಿದರು.

ಬಿಜೆಪಿ ಸರ್ಕಾರ ರಚನೆಯಲ್ಲಿ ನನ್ನ ಸಹಕಾರ ಪಡೆದು ನನಗೆ ಅನ್ಯಾಯ ಮಾಡಿದರು. ಜನರಿಗಾಗಿ ಅವರ ಜೊತೆ ಹೊಂದಿಕೊಂಡು ಕೆಲಸ ಮಾಡಿದರೂ ನನಗೆ ಬಿಜೆಪಿಯವರು ಅನ್ಯಾಯ ಮಾಡಿದರು. ಶೇ. 30% ರಷ್ಟು ಯಡಿಯೂರಪ್ಪ ಅನ್ಯಾಯ ಮಾಡಿದರೆ, ಇಲ್ಲಿನ ಶಾಸಕ ಅರುಣಕುಮಾರ ಪೂಜಾರ್‌ ಶೇ.  70% ರಷ್ಟು ಅನ್ಯಾಯ ಮಾಡಿದರು ಎಂದು ಹೇಳಿದ ಆರ್. ಶಂಕರ್ ಜೊತೆ ಮುಖಂಡರಾದ ರತ್ನಾಕರ ಕುಂದಾಪುರ, ರಾಜು ಅಡಿವೆಪ್ಪನವರ, ಎಂ.ಬಿ. ಜೋಗಾರ ಮತ್ತಿತರರಿದ್ದರು.

ಊರಿಗೆ ಬೇಡಾದ ಅರುಣ : ನನ್ನ ಜನ ನನ್ನ ಬಳಿ ಇದ್ದಾರೆ. ನನ್ನನ್ನು ಯಾರೂ ಬಿಟ್ಟು ಹೋಗಿಲ್ಲ. ಯಾರೋ ಒಂದಿಬ್ಬರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.  ಶಾಸಕನಾಗಿ ಮೂರು ವರ್ಷಗಳಲ್ಲಿ ಜನರಿಂದ ದೂರವಾದ ಅರುಣಕುಮಾರ ಪೂಜಾರ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಮಾಡಿದ್ದಾರೆ. ಊರಿಗೆ ಬೇಡಾದವರನ್ನು ಅಧ್ಯಕ್ಷನನ್ನಾಗಿ ಮಾಡಿರುವುದು ಬಿಜೆಪಿ ಅವನತಿಯ ಮುನ್ಸೂಚನೆ ಎಂದು ಶಂಕರ್ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

error: Content is protected !!