ಸಿಟಿ ಫ್ಯಾಮಿಲಿ ಸೆಂಟರ್ ಮತ್ತು ಸಾಧು ವೀರಶೈವ ಸಮಾಜ (ಹರಿಹರ) ಇವರ ಆಶ್ರಯದಲ್ಲಿ ಇಂದಿನಿಂದ ಮೂರು ದಿನ ಶಿವಸಂಚಾರ ನಾಟಕ ಏರ್ಪಡಿಸಲಾಗಿದೆ.
ಇಂದು, ಜಯಂತ್ ಕಾಯ್ಕಿಣಿ ರಚನೆಯ ಹುಲುಗಪ್ಪ ಕಟ್ಟಿಮನಿ ನಿರ್ದೇಶನದ `ಜೊತೆಗಿರುವನು ಚಂದಿರ’ ನಾಟಕ, ನಾಳೆ ಮಂಗಳವಾರ ಕೆ.ಎಸ್. ಸಾಳಂಕಿ ರಚನೆಯ ಮಾಲತೇಶ ಆರ್. ಬಡಿಗೇರ್ ವಿನ್ಯಾಸ ನಿರ್ದೇಶನದ `ತಾಳಿಯ ತಕರಾರು’ ಹಾಗೂ ದಿನಾಂಕ 3ರ ಬುಧವಾರ ಡಾ. ನಟರಾಜ್ ಬೂದಾಳು ರಚನೆಯ ಸಿ. ಬಸವಲಿಂಗಯ್ಯ ನಿರ್ದೇಶನದ `ಕಲ್ಯಾಣದ ಬಾಗಿಲು’ ನಾಟಕಗಳು ಪ್ರದರ್ಶನಗೊಳ್ಳಲಿವೆ.
ಹರಿಹರ ವಿದ್ಯಾನಗರದ ಸಿಟಿ ಫ್ಯಾಮಿಲಿ ಸೆಂಟರ್ನಲ್ಲಿ ಪ್ರತಿದಿನ ಸಂಜೆ 7.30 ರಿಂದ ನಾಟಕ ಪ್ರದರ್ಶನ ಪ್ರಾರಂಭವಾಗಲಿದ್ದು, ಸಾಣೇಹಳ್ಳಿ ಶಿವಕುಮಾರ ಕಲಾ ಸಂಘದವರು ಅಭಿನಯಿಸಲಿದ್ದಾರೆ.