ಮಾನ್ಯರೇ,
ನಗರದ ರಿಂಗ್ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಸ್ತೆಗೆ ಅಡ್ಡಲಾಗಿ ಯಾವುದೋ ಪೈಪ್ ಲೈನ್ ಹಾಕಲು ನೆಲವನ್ನು ಅಗೆದು ಅದನ್ನು ಮುಚ್ಚಿರುವುದಿಲ್ಲ. ಇದರಿಂದ ಇಲ್ಲಿ ಅಡ್ಡಾಡುವ ವಾಹನ ಸವಾರರಿಗೆ ದೊಡ್ಡ ಸವಾಲಾಗಿದೆ.
ಗ್ರೀನ್ ಸಿಗ್ನಲ್ ಆದ ಕೂಡಲೇ ಫ್ಲೈ-ಓವರ್ ಕಡೆಯಿಂದ ನೇರವಾಗಿ ಬರುವ ವಾಹನ ಸವಾರರಿಗೆ ರಸ್ತೆ ಕತ್ತರಿಸಿದಂತಿರುವ ಈ ಗುಂಡಿ ದೂರದಿಂದ ಕಾಣುವುದಿಲ್ಲ. ಅದನ್ನು ಗಮನಿಸದೇ ವೇಗವಾಗಿ ಬರುತ್ತಾರೆ. ಗುಂಡಿ ಕಂಡ ಕೂಡಲೇ ಗಕ್ಕನೆ ಬ್ರೇಕ್ ಹಾಕಿದರೆ, ಹಿಂದಿನಿಂದ ಬರುವ ವಾಹನಗಳು ಡಿಕ್ಕಿ ಹೊಡೆಯಬೇಕಾಗುತ್ತದೆ. ಈ ಸಮಸ್ಯೆಯೇನು ಇಂದು-ನಿನ್ನೆಯದಲ್ಲ. ವರ್ಷವೇ ಕಳೆಯುತ್ತಾ ಬಂದಿದೆ. ಆದರೂ ಇದು ಸಂಬಂಧಿಸಿದವರ ಗಮನಕ್ಕೆ ಬಾರದಿರುವುದು ಶೋಚನೀಯ ಸಂಗತಿ. ಅದೂ ಹೆದ್ದಾರಿಯಂತಹ ಜನ-ವಾಹನ ನಿಬಿಡ ವೃತ್ತದಲ್ಲಿ.
ನೊಂದ ವಾಹನ ಸವಾರ, ದಾವಣಗೆರೆ.