ದಾವಣಗೆರೆ, ಮಾ. 31 – ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ, ಶ್ರೀ ಮುರುಘಾ ಮಠದ ಉಪಾಧ್ಯಕ್ಷರಾಗಿದ್ದ ದಿ. ಪ್ರೊ. ಎಸ್.ಹೆಚ್. ಪಟೇಲ್ ಅವರ ಧರ್ಮಪತ್ನಿ ಶ್ರೀಮತಿ ಅಮೃತ ಪಟೇಲ್ ಅವರ ನಿಧನಕ್ಕೆ ಶ್ರೀ ಶಿವಮೂರ್ತಿ ಮುರುಘಾ ಶರಣರು ಸಂತಾಪ ವ್ಯಕ್ತಪಡಿಸಿದ್ದಾರೆ. ಶ್ರೀಗಳು, ಮೃತರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುರುಘಾ ಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ, ಎಂ. ಜಯಕುಮಾರ್ ಮೊದಲಾದವರಿದ್ದರು.
December 23, 2024