ಚುನಾವಣೆ : ಬಿಜೆಪಿ ಅಭ್ಯರ್ಥಿ ಆಯ್ಕೆಗೆ ವಿರೋಧ ಮುಂದುವರೆಸಿದ 2008ರ ಪಾಲಿಕೆ ಬಿಜೆಪಿ ಸದಸ್ಯರು

ಚುನಾವಣೆ : ಬಿಜೆಪಿ ಅಭ್ಯರ್ಥಿ ಆಯ್ಕೆಗೆ ವಿರೋಧ ಮುಂದುವರೆಸಿದ 2008ರ ಪಾಲಿಕೆ ಬಿಜೆಪಿ ಸದಸ್ಯರು

ದಾವಣಗೆರೆ, ಮಾ.29- ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ವಿರುದ್ಧ ಅಸಮಾಧಾನಗೊಂಡಿದ್ದವರಲ್ಲಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ನೇತೃ ತ್ವದ ತಂಡ ಸಮಾಧಾನಗೊಂಡಿದ್ದರೆ, ಮತ್ತೊಂದು ಗುಂಪಿನ ವಿರೋಧ ಇನ್ನೂ ಮುಂದುವರೆದಿದೆ.

ಮಹಾನಗರ ಪಾಲಿಕೆಯ 2008ರ ಅವಧಿಯಲ್ಲಿನ ಬಿಜೆಪಿಯ 22 ಸದಸ್ಯರ ಕೂಟ ಸಂಸದರ ನಡೆಯ ಬಗ್ಗೆ ತಮ್ಮ ಅಸಮಾಧಾನ ಮುಂದುವರೆಸಿದ್ದು, ಇಂದು ಹೋಟೆಲ್ಲೊಂದರಲ್ಲಿ ಸಭೆ ನಡೆಸಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಗರಕ್ಕಾಗಮಿಸಿ, ರವೀಂದ್ರನಾಥ್ ಮತ್ತು ಅವರ ತಂಡದವರೊಂದಿಗೆ ಚರ್ಚಿಸಿ ವಿರೋಧವನ್ನು ಶಮನಗೊಳಿಸುವ ಪ್ರಯುಕ್ತ ನಡೆಸಿದ್ದನ್ನು ಸಭೆಯಲ್ಲಿ ಪ್ರಸ್ತಾಪಿಸಿದ 2008ರ ಪಾಲಿಕೆಯ ಬಿಜೆಪಿ ಸದಸ್ಯರು, ತಮ್ಮ  ಮುಂದಿನ ನಡೆಯ ಬಗ್ಗೆ ಶೀಘ್ರದಲ್ಲೇ ಮತ್ತೊಂದು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದ್ದಾರೆ.

ಹೆಚ್.ಎನ್. ಶಿವಕುಮಾರ್, ಸಂಕೋಳ್ ಚಂದ್ರಶೇಖರ್, ಆವರಗೆರೆ ಸುರೇಶ್, ಎಂ.ಪಿ. ಕೃಷ್ಣಮೂರ್ತಿ ಪವಾರ್, ಹೆಚ್.ಎಂ. ರುದ್ರಮುನಿ ಸ್ವಾಮಿ, ಹೆಚ್.ಎನ್. ಗುರುನಾಥ್, ಎ.ವೈ. ಪ್ರಕಾಶ್, ಕೆ.ಆರ್. ವಸಂತ ಕುಮಾರ್, ಕಾಟೆ, ಸಿದ್ದೇಶ್, ಶಿವರಾಜ್ ಪಾಟೀಲ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

error: Content is protected !!