ದಾವಣಗೆರೆ, ಮಾ. 29 – ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ಹಾಗೂ ಜನಪ್ರಿಯ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಸ್ಥೆ ಇವರ ವತಿಯಿಂದ ನಾಡಿದ್ದು ದಿನಾಂಕ 31ರ ವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಬಡ್ಡಿ ಪ್ರೀಮಿಯರ್ ಲೀಗ್ ಜನಪ್ರಿಯ ಟ್ರೋಫಿ ಪಂದ್ಯಾವಳಿಯನ್ನು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪುತ್ರ ಶಾಮನೂರು ಸಮರ್ಥ್ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಮಾರಂಭದ ಮುಖ್ಯ ಅತಿಥಿಗಳಾಗಿ ರಾಜು ರೆಡ್ಡಿ, ಶಿವಗಂಗಾ ಶ್ರೀನಿವಾಸ್, ಹೆಚ್. ನಿಜಗುಣ, ಕುರುಡಿ ಗಿರೀಶ್, ಎಂ. ನಾಗರಾಜ್, ಹಾಗು ಪಂದ್ಯಾವಳಿಯ ಸಂಘಟಕ ಪ್ರಕಾಶ್ ಗೌಡ ಇನ್ನು ಮುಂತಾದವರು ಇದ್ದರು.
January 10, 2025