ಹೊನ್ನಾಳಿ, ಮಾ. 29 – ತಾಲ್ಲೂಕಿನ ಸುಂಕದಕಟ್ಟೆ ಗ್ರಾಮದಲ್ಲಿ ನಿನ್ನೆ ಬೆಳಗಿನ ಜಾವ ಶ್ರೀ ನರಸಿಂಹ ಸ್ವಾಮಿ ದೊಡ್ಡ ರಥೋತ್ಸವ ಭಕ್ತರ ಜಯಘೋಷದ ಮಧ್ಯೆ ವಿಜೃಂಭಣೆಯಿಂದ ನೆರವೇರಿತು. ಅಲಂಕೃತ ರಥಕ್ಕೆ ಭಕ್ತರು ಮಂಡಕ್ಕಿ, ಮೆಣಸಿನಕಾಳು, ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.
ಸಂಜೆ ಓಕುಳಿ ಉತ್ಸವ ನೆರವೇರಿತು. ಯುವಕರು ಒಬ್ಬರಿಗೊಬ್ಬರು ಬಣ್ಣ ಎರಚುತ್ತಾ ಸಂಭ್ರಮಿಸಿದರು. ಬಳಿಕ ಮಣೇವು (ಭೂತನ ಸೇವೆ) ಜರುಗಿತು.