ಸಿ.ಟಿ. ರವಿ ಕ್ಷಮೆ ಯಾಚನೆಗೆ ಭೋವಿ ಸಮಾಜದ ಆಗ್ರಹ

ದಾವಣಗೆರೆ, ಮಾ. 28- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿಯವರ ತಾಯಿಯ ಬಗ್ಗೆ ಬಿಜೆಪಿಯ ಸಿ.ಟಿ. ರವಿ ಅವಹೇಳಕಾರಿಯಾಗಿ ಮಾತನಾಡಿರುವುದು ಭೋವಿ ಸಮಾಜಕ್ಕೆ   ನೋವುಂಟು ಮಾಡಿದೆ. ಈ ಕೂಡಲೇ ಸಿ.ಟಿ.ರವಿ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಅವರು ದಾವಣಗೆರೆ ಜಿಲ್ಲೆಗೆ ಬಂದಾಗ ಕಪ್ಪು ಬಟ್ಟೆ ಪ್ರದರ್ಶಿಸಿ, ಬಹಿಷ್ಕರಿಸಲಾಗುವುದು ಎಂದು ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಹೆಚ್. ಜಯಣ್ಣ ಹೇಳಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ವ್ಯವಸ್ಥೆಯಲ್ಲಿ ಟೀಕೆ ಟಿಪ್ಪಣಿಗಳಿರುವುದು ಸಹಜ. ಆದರೆ ಶಿವರಾಜ್ ತಂಗಡಗಿಯವರ ತಾಯಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಸಿ.ಟಿ.ರವಿ ಸಂಸ್ಕೃತಿ ಎಂತಹುದು ಎಂದು ತೋರಿಸುತ್ತದೆ ಎಂದರು. ಸಿ.ಟಿ. ರವಿ ಹೊಲಸು ಮನಸ್ಸಿನ ರಾಜಕಾರಣಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಡಿ.ವಿ. ಮಲ್ಲಿಕಾರ್ಜುನ್, ಜಿ.ಸಿ. ಮಂಜಪ್ಪ, ಶ್ರೀಮತಿ ಉಮಾ ಕುಮಾರ್, ಅರ್ಜುನ್, ನಾಗರಾಜ್, ರಾಮಾಂಜನೇಯ ಹಾಗೂ ಇತರರಿದ್ದರು.

error: Content is protected !!