ಸಾಹಿತಿ ಸುಕನ್ಯಾ ತ್ಯಾವಣಿಗೆ ಅವರಿಗೆ `ಶಿವಶರಣೆ ನೀಲಾಂಬಿಕೆ ರಾಜ್ಯ’ ಪ್ರಶಸ್ತಿ

ಸಾಹಿತಿ ಸುಕನ್ಯಾ ತ್ಯಾವಣಿಗೆ ಅವರಿಗೆ `ಶಿವಶರಣೆ ನೀಲಾಂಬಿಕೆ ರಾಜ್ಯ’ ಪ್ರಶಸ್ತಿ

ದಾವಣಗೆರೆ, ಮಾ.28- ಹಿರಿಯೂರಿನ ವಿಶ್ವ ಕನ್ನಡ ಕಲಾ ಸಂಸ್ಥೆ ವತಿಯಿಂದ ಬೆಂಗಳೂರು ಬಗಲಗುಂಟೆ ಮಹಾಲಕ್ಷ್ಮಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ  ನಾಳೆ ದಿನಾಂಕ 29ರ ಶುಕ್ರವಾರ ನಡೆಯುವ ವಿಶ್ವ ಕನ್ನಡ ಪ್ರಥಮ ರಾಜ್ಯಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಪ್ರದಾನ ಮಾಡುವ ಜ್ಞಾನಯೋಗಿ  ಶಿವಶರಣೆ ನೀಲಾಂಬಿಕೆ ಪ್ರಶಸ್ತಿಗೆ 26 ಮಂದಿ ಮಹಿಳಾ ಸಾಧಕಿಯರು ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಈ. ರವೀಶ್ ತಿಳಿಸಿದ್ದಾರೆ.

ಸುಕನ್ಯಾ ತ್ಯಾವಣಿಗೆ (ದಾವಣಗೆರೆ), ಶೈನಾ ಶ್ರೀನಿವಾಸ ಶೆಟ್ಟಿ (ಬೆಂಗಳೂರು), ಬಿ. ಶಾಂತಕುಮಾರಿ (ಚಿತ್ರದುರ್ಗ), ಡಾ. ಅನುರಾಧ ಕುರುಂಜಿ (ಸುಳ್ಯ), ಕಾವೇರಿ ಎಸ್. ಬಿರಾದಾರ (ಬೀದರ್), ಪದ್ಮನೆಲ್ಲ ತಾಳ ಚಪುರ (ನಂಜನಗೂಡು), ಸುಮಿತ್ರ ಬಿ.ಆರ್. (ಹಾಸನ), ಪ್ರೇಮಲತಾ (ಬೀದರ್), ಕೆ.ಜೆ. ಹೊನ್ನಾದೇವಿ (ಗದಗ), ಪುಷ್ಪಾವತಿ ಟಿ.ಎಸ್. (ಸಾಗರ), ಸುಮನ್ ರಾವ್ (ಮಂಡ್ಯ), ಅನಿತಾ ಕೆ.ಆರ್. (ಶಿರಾ), ಶೋಭಾ ಎಂ. ಕಾಗಿ (ಬೆಂಗಳೂ ರು), ಡಾ. ಚಿ.ದೇ. ಸೌಮ್ಯ (ಬೆಂಗಳೂರು), ಕಾವ್ಯಶ್ರೀ (ಕೊಡಗು), ಪ್ರೀತಾ ಕೃಷ್ಣ (ವಿರಾಜಪೇಟೆ), ವೇದಾವತಿ ಸೋಮಸುಂದರ, ಪ್ರೇ ಮಾಂಜಲಿ (ಕೊಡಗು), ಕಾವ್ಯಶ್ರೀ ಎಂ.ಕೆ. ವಿರಾಜ ಪೇಟೆ, ಶೃತಿ ಟಿ.ಎಸ್. (ಮೈಸೂರು), ಮೀನಾಕ್ಷಿ ಆರ್. (ಮೈ ಸೂರು), ಕವಿತಾ ಎಸ್.ಆರ್ (ಹಾಸನ), ಪ್ರಮೀಳಾ ಮಹಾದೇವ್‌ (ದೊಡ್ಡಬಳ್ಳಾಪುರ), ಹೆಚ್.ಎಸ್.ಪ್ರತಿಮಾ ಹಾಸನ್ (ಹಾಸನ), ಪ್ರಮೀಳಾ ದೀಪಕ್ ಪರ್ಮುದೆ (ಮಂಗಳೂರು) ಆಯ್ಕೆಯಾಗಿದ್ದಾರೆ.

error: Content is protected !!