ಬೆಂಗಳೂರು, ಮಾ. 27 – ಚಿತ್ರದುರ್ಗ ಲೋಕಸಭಾ ಕ್ಷೇತ್ರ ದಿಂದ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸ್ಪರ್ಧಿಸ ಲಿದ್ದಾರೆ ಎಂದು ಬಿಜೆಪಿ ಘೋಷಿ ಸಿದೆ. ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.
ಆಡಳಿತ ವಿರೋಧಿ ಮನೋಭಾವ ಎದುರಿಸುತ್ತಿರುವ ಕಾರಣದಿಂದ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ನಾರಾಯಣಸ್ವಾಮಿ ಅವರು ಮೂಲತಃ ಚಿತ್ರದುರ್ಗದವರಲ್ಲ. ಅವರು ಬೆಂಗಳೂರು ಸಮೀಪದ ಆನೇಕಲ್ನಿಂದ ಈ ಹಿಂದೆ ಶಾಸಕರಾಗಿದ್ದರು.
ಇದರೊಂದಿಗೆ ರಾಜ್ಯದ 28 ಕ್ಷೇತ್ರಗಳ ಪೈಕಿ ಬಿಜೆಪಿ ಸ್ಪರ್ಧಿಸಲಿರುವ ಎಲ್ಲಾ 25 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದಂತಾ ಗಿದೆ. ಮಂಡ್ಯ, ಹಾಸನ ಹಾಗೂ ಕೋಲಾರಗಳಲ್ಲಿ ಜೆಡಿಎಸ್ ಸ್ಪರ್ಧಿಸಲಿದೆ.
ವಿಜಯಪುರ ಜಿಲ್ಲೆಯ ಕಾರಜೋಳ ಅವರು ಐದು ಬಾರಿ ಬಾಗಲಕೋಟೆ ಜಿಲ್ಲೆಯ ಮುಧೋಳದಿಂದ ಶಾಸಕರಾಗಿದ್ದಾರೆ. 2023ರಲ್ಲಿ ಕಾಂಗ್ರೆಸ್ ಪಕ್ಷದ ಆರ್.ಬಿ. ತಿಮ್ಮಾಪುರ ಅವರು ಕೋರಜೋಳರನ್ನು ಸೋಲಿಸಿದ್ದರು.