ದಾವಣಗೆರೆ, ಮಾ.25- ಅನಧಿಕೃತ ಪಂಪ್ಸೆಟ್ ತೆರವುಗೊಳಿಸುವ ಸಲುವಾಗಿ ಮಾ.25ರ ಮಧ್ಯಾಹ್ನ 2ರಿಂದ ಮಾ.28ರ ಮಧ್ಯಾಹ್ನ 2ರವರೆಗೆ ಮಾಯಕೊಂಡ ಹೋಬಳಿ ನಲ್ಕುಂದ ಬಳಿ, ತಾಲ್ಲೂಕು ಗಡಿಯಿಂದ ಕುರ್ಕಿ ಗ್ರಾಮ ವ್ಯಾಪ್ತಿಯಲ್ಲಿ ಬರುವ ಭದ್ರಾ ಕಾಲುವೆ ಹಾದು ಹೋಗುವ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ತಹಶೀಲ್ದಾರ್ ಡಾ. ಎಂ.ಬಿ. ಅಶ್ವತ್ಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭೀಕರ ಬರಗಾಲದ ದೃಷ್ಟಿಯಿಂದ ಭದ್ರಾ ಕಾಲುವೆಯಿಂದ ದಾವಣಗೆರೆ ಸೇರಿದಂತೆ ಅನೇಕ ಗ್ರಾಮಗಳಿಗೆ ಕುಡಿಯುವ ನೀರು ನೀಡಲಾಗುತ್ತಿರುವ ಹಿನ್ನೆಲೆಯಲ್ಲಿ ಪಂಪ್ ಸೆಟ್ ತೆರವಿಗಾಗಿ ಕಾಲುವೆಯ ಬಲ ಮತ್ತು ಎಡಭಾಗದಿಂದ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧವಿದ್ದು, ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
February 26, 2025