5 ವರ್ಷದಲ್ಲೇ ಇರಾನ್ ರಿಯಾಲ್ ಮೌಲ್ಯ ಶೇ.95 ಕುಸಿತ

5 ವರ್ಷದಲ್ಲೇ ಇರಾನ್ ರಿಯಾಲ್ ಮೌಲ್ಯ ಶೇ.95 ಕುಸಿತ

ಸಂಘರ್ಷದ ನಡುವೆ ಭುಗಿಲೆದ್ದ ಆರ್ಥಿಕ ಸಂಕಷ್ಟ

ತೆಹರಾನ್, ಮಾ. 25 – ಇರಾನ್ ಜನತೆ ಪರ್ಷಿಯನ್ ಹೊಸ ವರ್ಷ ಆಚರಿಸುವ ಮಧ್ಯದಲ್ಲೇ, ಅದರ ಹಣದ ಮೌಲ್ಯ ಡಾಲರ್ ಎದುರು ಪಾತಾಳ ಕಾಣುತ್ತಿದೆ.

ಭಾನುವಾರದಂದು ಇರಾನ್‌ನ ರಿಯಾಲ್ ಮೌಲ್ಯ ಡಾಲರ್ ಎದುರು 6,13,500ರ ಹಂತಕ್ಕೆ ಕುಸಿದಿದೆ. ಮಾರ್ಚ್ 20 ರಿಂದ ಏಪ್ರಿಲ್ 2ರ ನಡುವೆ ಇರಾನ್‌ನಲ್ಲಿ ನವರೋಜ್‌ ಸಂಭ್ರಮ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ನಗದು ವಿನಿಮಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿಲ್ಲ.

ರಜೆ ದಿನಗಳಲ್ಲಿ ಡಾಲರ್ ಬೇಡಿಕೆ ಹೆಚ್ಚಾ ಗಿದೆ. ಈ ದಿನಗಳಲ್ಲಿ ವಿನಿಮಯ ಅಂಗಡಿಗಳು ತೆರೆದಿರುವುದಿಲ್ಲ. ಹೀಗಾಗಿ ರಿಯಾಲ್ ಮೌಲ್ಯ ಹೆಚ್ಚಿನ ಪ್ರಮಾಣದಲ್ಲಿ ಕುಸಿದಿದೆ ಎಂದು ವಿನಿಮಯ ಅಂಗಡಿಯಲ್ಲಿ ಕೆಲಸ ಮಾಡುವ ಮೊಹಸೇನ್ ಎಂಬುವವರು ಹೇಳಿದ್ದಾರೆ.

ಎರಡು ವಾರಗಳ ರಜಾ ಅವಧಿಯಲ್ಲಿ ಜನರು ವಿದೇಶಗಳಿಗೆ ಪ್ರವಾಸಕ್ಕೆ ತೆರಳುತ್ತಾರೆ. ಈ ಅವಧಿಯಲ್ಲಿ ಅಮೆರಿಕದ ಡಾಲರ್ ಹಾಗೂ ಯುರೋಪ್‌ಗಳ ಬೇಡಿಕೆ ಹೆಚ್ಚಾಗಿರುತ್ತದೆ.

ಆರು ದಿನಗಳಲ್ಲೇ ರಿಯಾಲ್ ಬೆಲೆ ಶೇ.5ರಷ್ಟು ಕುಸಿದಿದೆ. ನಾವು ವಿನಾಯಿತಿ ದರದಲ್ಲಿ ವಿದೇಶ ಪ್ರವಾಸದ ಟಿಕೆಟ್ ಪಡೆದಿದ್ದೆವು. ಈಗ ಪೂರ್ಣ ಬೆಲೆ ಪಾವತಿಸುತ್ತಿರುವ ಭಾವನೆ ಬರುತ್ತಿದೆ ಎಂದು ಮೊಜ್ತಬಾ ಹೇಳಿದ್ದಾರೆ.

ವಿನಿಮಯ ದರ ಹೆಚ್ಚಾಗಿರುವುದು ಜನರ ಜೀವನಕ್ಕೆ ಬಿಸಿ ಮುಟ್ಟಿಸುತ್ತಿದೆ. ಮನೆ ಹಾಗೂ ಬಾಡಿಗೆ ದುಬಾರಿಯಾಗುತ್ತಿವೆ. ಮಾರ್ಚ್ 18ರಂದು ಡಾಲರ್ ಬೆಲೆ 5.90 ಲಕ್ಷ ರಿಯಾಲ್ ಆಗಿತ್ತು.

ಈ ರೀತಿಯ ಕುಸಿತದಿಂದಾಗಿ ಜನರ ಜೀವಮಾನದ ಗಳಿಕೆಯಲ್ಲ ಕರಗಿ ಹೋಗುತ್ತಿದೆ. 2015ರ ಸಮಯಕ್ಕೆ ಹೋಲಿಸಿದರೆ, ಈಗ ರಿಯಾಲ್ ಮೌಲ್ಯ ಶೇ.95ರಷ್ಟು ಕುಸಿದಿದೆ. 

ಆ ಸಮಯದಲ್ಲಿ ಡಾಲರ್ ಮೌಲ್ಯವನ್ನು ಸಾವಿರ ರಿಯಾಲ್‌ಗಳಲ್ಲಿ ಅಳೆಯಲಾಗುತ್ತಿತ್ತು. ಈಗ ಲಕ್ಷಗಳ ಲೆಕ್ಕದಲ್ಲಿ ಅಳೆಯಲಾಗುತ್ತಿದೆ. 

ಇರಾನ್ ಸ್ಟಾಟಿಸ್ಟಿಕ್ಸ್ ಸೆಂಟರ್ ಪ್ರಕಾರ ಫೆಬ್ರವರಿ 2024ರಲ್ಲಿ ಹಣದುಬ್ಬರ ಪ್ರಮಾಣ ಶೇ.42.5ರಷ್ಟಿದೆ. ಸೆಂಟ್ರಲ್ ಬ್ಯಾಂಕ್ ಪ್ರಕಾರ ಹಣದುಬ್ಬರ ಶೇ.46ರಷ್ಟಿದೆ. ಯಾವುದು ಸರಿ, ಯಾವುದು ತಪ್ಪು ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ನೀಡಲಾಗಿಲ್ಲ.

ಅಮೆರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಅವರು ಅಣು ಒಪ್ಪಂದವನ್ನು ಕೈ ಬಿಟ್ಟ ನಂತರ ಪಶ್ಚಿಮ ದೇಶಗಳ ಜೊತೆಗಿನ ಇರಾನ್ ಸಂಬಂಧ ಹದಗೆಟ್ಟಿದೆ. 

ಇರಾನ್ ಜೊತೆ ಅಣು ಒಪ್ಪಂದ ಮಾಡಿಕೊಳ್ಳಲು ಸಿದ್ಧವಿರುವುದಾಗಿ ಅಮೆರಿಕದ ಹಾಲಿ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ. ಆದರೆ, ಇದಕ್ಕಾಗಿ ಮಾರ್ಗಸೂಚಿ ಇನ್ನೂ ಸಿದ್ಧವಾಗಿಲ್ಲ. ಈ ನಡುವೆ, ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಹಿಂಸಾಚಾರ ಸಮಸ್ಯೆ ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ.

ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವ ರಷ್ಯಾಗೆ ಡ್ರೋನ್‌ಗಳನ್ನು ನೀಡಲು ಇರಾನ್ ನಿರ್ಧಾರ ತೆಗೆದುಕೊಂಡಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಸೂಕ್ಷ್ಮವಾಗಿಸಿದೆ.

ಈ ಹಿಂದೆ ಆರ್ಥಿಕ ಬಿಕ್ಕಟ್ಟು ಉಲ್ಬಣಿಸಿ ದಾಗಲೆಲ್ಲ ಇರಾನ್ ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಈ ಬಾರಿ, ರಾಜಕೀಯ ಚಟುವಟಿಕೆಯ ಬದಲು ಆಹಾ ರದ ಚಿಂತೆಯಲ್ಲಿ ತೊಡಗಿದ್ದಾರೆ. ಸರ್ಕಾರ ಸಹ ಭಿನ್ನಮತವನ್ನು ತೀವ್ರವಾಗಿ ದಮನಿಸುತ್ತಿದೆ.

ಕಳೆದ ತಿಂಗಳು ನಡೆದ ಸಂಸದೀಯ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಮತದಾನ ವಾಗಿತ್ತು. ಚುನಾವಣೆಯಲ್ಲಿ ತೀವ್ರವಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದರು. ಕಳೆದ ಎರಡು ದಶಕಗಳಿಂದ ಇರಾನ್‌ನಲ್ಲಿ ತೀವ್ರವಾದಿಗಳ ಪ್ರಾಬಲ್ಯವೇ ಹೆಚ್ಚಾಗಿದೆ.

error: Content is protected !!