ವೃದ್ಧಾಪ್ಯದಲ್ಲೂ ಕೃತಿ ರಚಿಸಿದ ಕೃತಿಕಾರರಿಗೆ ಓಂಕಾರ ಶ್ರೀಗಳ ಶ್ಲ್ಯಾಘನೆ
ಪತ್ರಿಕೆಗಳಿದ್ದ ಮನೆಯ ಲಕ್ಷಣವೇ ಬೇರೆಯಾಗಿತ್ತು, ಅಂದಿನ ಜನರು ಸಾಹಿತ್ಯ ಮತ್ತು ಪತ್ರಿಕೆ ಓದಿಕೊಂಡು ಸಮಾಜ ತಿದ್ದುವ ಕಾರ್ಯ ಮಾಡುತ್ತಿದ್ದರು. ಆದರೆ ಇಂದಿನ ಯುವಕರು ಸಾಹಿತ್ಯ ಚಿಂತನೆಯಿಂದ ದೂರ ಉಳಿದಿರುವುದು ಆತಂಕ ಪಡುವಂತಾಗಿದೆ.
-ಓಂಕಾರ ಶಿವಾಚಾರ್ಯ ಶ್ರೀಗಳು
ದಾವಣಗೆರೆ, ಮಾ.24- ಪುಸ್ತಕ ಮತ್ತು ಮಸ್ತಕದ ಸಂಬಂಧವನ್ನು ಸಾಮಾಜಿಕ ಜಾಲತಾಣಗಳು ಮೊಟಕುಗೊಳಿಸುತ್ತಿವೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಶ್ರೀಗಳು ಬೇಸರ ವ್ಯಕ್ತಪಡಿಸಿದರು.
ವಿಶ್ವ ಕಲ್ಯಾಣ ಪರಿಸರ, ಗ್ರಾಹಕ, ಸಾಂಸ್ಕೃತಿಕ ಪರಿಷತ್‌ನ ಸಹಯೋಗದಲ್ಲಿ ವಿಶ್ವ ವೀರಶೈವ ಲಿಂಗಾಯತ ಏಕೀಕರಣ ಪರಿಷತ್ ವತಿಯಿಂದ ನಗರದ ರೋಟರಿ ಬಾಲ ಭವನದಲ್ಲಿ ಭಾನುವಾರ ನಡೆದ `ಅಮೃತ ಗೋಸಲ ನಿರಂಜನ ವಂಶ ಪರಂಪರೆ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಸಾಹಿತ್ಯಾಸಕ್ತರು ಮತ್ತು ಅಧ್ಯಾತ್ಮಿಗಳ ಚಿಂತನ ಮಂಥನವಾಗುವ ದೆಸೆಯಿಂದ ಅಮೃತ ಗೋಸಲ ನಿರಂಜನ ವಂಶ ಪರಂಪರೆ ಕೃತಿಯು ಸಾಹಿತ್ಯ ರೂಪದಲ್ಲಿ ಚಿತ್ರಣಗೊಂಡಿಗೆ ಎಂದು ತಿಳಿಸಿದರು.
ನಿರಂಜನ ಗುರು ಪರಂಪರೆಗೆ ಗೋಸಲ ಎನ್ನುವ ಹೆಸರು ಯಾವ ರೀತಿ ಬಂತು ಮತ್ತು ಈ ಪರಂಪರೆಯ ವಿಶೇಷತೆ ಏನು ಎಂಬುದನ್ನು ಕೃತಿಯಲ್ಲಿ ಕಾತಣಬಹುದು ಎಂದರು.
ವೀರಶೈವ ಧರ್ಮದ ಆತ್ಮ, ಭಾವ, ಜೀವ ದಂತಿರುವ ತತ್ವತ್ರಯಗಳಾದ ಅಷ್ಟಾವರು, ಪಂಚಾಚಾರ ಮತ್ತು ಷಟ್‌ಸ್ಥಲದ ಮಹತ್ವ ಬಿಂಬಿಸುವ ಪರಂಪರೆ ಇದಾಗಿದೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಎಚ್.ಬಿ.
ಮಂಜುನಾಥ್ ಮಾತನಾಡಿ, ಪ್ರಪಂಚದ ಎಲ್ಲ ಮುಂದುವರೆದ ರಾಷ್ಟ್ರಗಳಲ್ಲಿ ನಾಗರಿಕತೆ ಕಂಡರೆ, ಭಾರತದಲ್ಲಿ ಮಾತ್ರ ಸಂಸ್ಕೃತಿಯನ್ನು ಕಾಣುತ್ತಿದ್ದೇವೆ ಎಂದು ಹೇಳಿದರು.
ಸ್ವಹಿತವು ನಾಗರಿಕವಾದರೆ, ಇನ್ನೊಬ್ಬರಿಗೆ ಒಳಿತು ಮಾಡುವುದೇ ಸುಸಂಸ್ಕೃತಿ ಎಂದರು. ಧರ್ಮ ಶ್ರೇಷ್ಠ ತತ್ವಗಳಲ್ಲಿ ವೀರಶೈವ ಮತ್ತು ಲಿಂಗಾಯತ ತತ್ವವು ಒಂದಾಗಿದೆ. ಜನರು ಸರಳವಾಗಿ ರೂಢಿಸಿಕೊಳ್ಳುವ ತತ್ವಗಳ ಮಾರ್ಗ ವೀರಶೈವದಲ್ಲಿ ಇದೆ ಎಂದರು.
ವಿಶ್ವಕಲ್ಯಾಣಕ್ಕೆ ಬೇಕಾದ ಚಿಂತನೆಗಳನ್ನು ಭಾರತದಲ್ಲಿ ಮಾತ್ರ ಕಾಣಬಹುದಿದ್ದು, ಇಂತಹ ಸನಾತನದ ಮೌಲ್ಯಯುತ ಚಿಂತನೆ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಇದೇ ವೇಳೆ ಸ್ವರಚಿತ ವಚನಕಾರರಿಗೆ ಮತ್ತು ಕೃತಿಕಾರ ಎಸ್. ಮಲ್ಲಿಕಾರ್ಜುನ್ ಸೇರಿದಂತೆ ಹಲವರಿಗೆ ಸನ್ಮಾನಿಸಲಾಯಿತು.
ಪರಿಷತ್‌ನ ರೇವಣ್ಣ ಬಳ್ಳಾರಿ,
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ ಕುಮಾರ್, ನಿವೃತ್ತ ಮುಖ್ಯ ಶಿಕ್ಷಕಿ
ಜಿ.ಕೆ. ಶಕುಂತಲಾ, ಪರಿಷತ್‌ನ ಮಹಿಳಾ
ಘಟಕದ ಅಧ್ಯಕ್ಷರಾದ ಎ.ಬಿ. ರುದ್ರಮ್ಮ, ಬಸವರಾಜ ಹನುಮಲಿ, ಬಿ. ವೈ. ಶ್ರೀಕಂಠಮೂರ್ತಿ, ಇಂದೂಧರ ನಿಶಾನಿಮಠ, ಬಕ್ಕೇಶ್ ನಾಗನೂರು, ಸಂಗಪ್ಪ ತೋಟದ್, ಶಿವಕುಮಾರ್ ಶೆಟ್ಟರ್ ಮತ್ತು ಇತರರು ಇದ್ದರು.