ಜಜಮು ವೈದ್ಯಕೀಯ ಮಹಾವಿದ್ಯಾಲಯದ 2018ರ ಸಾಲಿನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭವು ಬಾಪೂಜಿ ಸಭಾಂಗಣದಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಶುಕ್ಲ ಶೆಟ್ಟಿ ತಿಳಿಸಿದ್ದಾರೆ.
ಬೆಂಗಳೂರಿನ ನ್ಯೂರೋ ಸೈನ್ಸಸ್ ನಿಮ್ಹಾನ್ಸ್ ಡೀನ್ ಡಾ.ಟಿ.ಸಿ ಯಶ್, ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್ಎಸ್. ಮಲ್ಲಿಕಾರ್ಜುನ್, ಎಸ್ಎಸ್ ಕೇರ್ ಟ್ರಸ್ಟ್ನ ಟ್ರಸ್ಟಿ ಪ್ರಭಾ ಮಲ್ಲಿಕಾರ್ಜುನ್, ಕಾಲೇಜಿನ ನಿರ್ದೇಶಕ ಡಾ.ಎಮ್.ಜಿ.ರಾಜಶೇಖರಪ್ಪ, ಡಾ.ಮಂಜುನಾಥ್, ಆಡಳಿತ ನಿರ್ದೇಶಕ ಟಿ.ಸತ್ಯನಾರಾಯಣ, ಡಾ. ಡಿ ಕುಮಾರ್ ಸೇರಿದಂತೆ, ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವರು.