25ಕ್ಕೆ ನಗರದಲ್ಲಿ ಹೋಳಿ ಹಬ್ಬ ಆಚರಣೆ

ದಾವಣಗೆರೆ, ಮಾ. 22 – ಹೋಳಿ ಹಬ್ಬ ಆಚರಣೆಯ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದ್ದು, ನಾಡಿದ್ದು ದಿನಾಂಕ 24ರಂದು ಸಂಜೆ ಕಾಮ ದಹನ ಮತ್ತು ದಿನಾಂಕ 25ರಂದು ಬೆಳಿಗ್ಗೆ ಹೋಳಿ ಆಡುವ ಸಂಪ್ರದಾಯದಂತೆ ದಾವಣಗೆರೆಯಲ್ಲಿ ಹೋಳಿ ಹಬ್ಬದ ಆಚರಣೆ ನಡೆಯುತ್ತದೆ ಎಂದು ಹಿಂದೂ ಜಾಗರಣ ವೇದಿಕೆ ತಿಳಿಸಿದೆ.

ಹೋಳಿ ಹಬ್ಬದ ಹಿಂದಿನ ದಿನ ಕಾಮದಾನ ಮಾಡುವುದು ಸನಾತನ ಪರಂಪರೆಯ ವಾಡಿಕೆ, ಇದು ಕೆಟ್ಟದ್ದರ ವಿರುದ್ಧ ಒಳ್ಳೆಯದರ ವಿಜಯ ಮತ್ತು ಹಳೆಯದನ್ನು ತೆಗೆದುಹಾಕುವುದು ಮತ್ತು ಹೊಸದನ್ನು ಪಡೆಯುವುದನ್ನು ಸಂಕೇತಿಸುತ್ತದೆ. ಬೆಂಕಿಯ ಸುತ್ತಲೂ ಹಾಡುಗಾರಿಕೆ ಮತ್ತು ನೃತ್ಯದಂತಹ ವಿವಿಧ ಆಚರಣೆಗಳನ್ನು ನಡೆಸಲಾಗುತ್ತದೆ ಎಂದು ದಕ್ಷಿಣ ಪ್ರಾಂತ ಸಹಸಂಚಾಲಕ ಸತೀಶ್ ಪೂಜಾರಿ ತಿಳಿಸಿದ್ದಾರೆ.

error: Content is protected !!