ಹರಿಹರ, ಮಾ.22- ನಗರದಲ್ಲಿ ಇಂದು ಶ್ರೀ ಗುರು ರೇವಣಸಿದ್ದೇಶ್ವರ ಸ್ವಾಮಿ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಹೊಸಭರಂಪುರ ಬಡಾವಣೆಯ ಶ್ರೀ ಗುರು ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರೀ ರೇವಣಸಿದ್ದೇಶ್ವರ ಸ್ವಾಮಿಗೆ ಮತ್ತು ಬೀರಲಿಂಗೇಶ್ವರ ಸ್ವಾಮಿಗೆ ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಅಭಿಷೇಕ ಅಲಂಕಾರ ಮಹಾ ಮಂಗಳಾರತಿ ಸೇರಿದಂತೆ, ವಿವಿಧ ಪೂಜಾ ಕಾರ್ಯಗಳನ್ನು ಮಾಡಲಾಯಿತು.
ಬೆಳಿಗ್ಗೆ 10 ಗಂಟೆಗೆ ಶ್ರೀ ರೇವಣಸಿದ್ದೇಶ್ವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ಮಹಿಳೆಯರು ಆರತಿ, ಡೊಳ್ಳು, ಸಮಾಳ, ಪುರವಂತರು ಸೇರಿದಂತೆ ವಿವಿಧ ಕಲಾ ಮೇಳಗಳೊಂದಿಗೆ ಅದ್ಧೂರಿ ಮೆರವಣಿಗೆ ಮಾಡಲಾಯಿತು.
ಮೆರವಣಿಗೆ ದೇವಸ್ಥಾನದ ಆವರಣದಿಂದ ಪ್ರಾರಂಭ ಗೊಂಡು ಹಳೇ ಪಿ.ಬಿ ರಸ್ತೆ, ಗಾಂಧಿ ವೃತ್ತ, ಮುಖ್ಯ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ದೇವಸ್ಥಾನ ರಸ್ತೆಯ ಮುಖಾಂತರ ಸಂಚರಿಸಿ, ಮತ್ತೆ ದೇವಸ್ಥಾನಕ್ಕೆ ಅಂತ್ಯಗೊಂಡಿತು. ಮಹಾ ಮಂಗಳಾರತಿ ನಂತರ ಅನ್ನ ಸಂತರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಗುರುಗಳಾದ ಮಂಜಯ್ಯ ಒಡೆಯರ್, ಮಾಜಿ ಶಾಸಕ ಎಸ್. ರಾಮಪ್ಪ, ಕುರುಬ ಸಮಾಜದ ಮಾಜಿ ಅಧ್ಯಕ್ಷ ಕೆ. ಜಡಿಯಪ್ಪ, ಕಾಂಗ್ರೆಸ್ ಪಕ್ಷದ ಮುಖಂಡ ನಂದಿಗಾವಿ ಶ್ರೀನಿವಾಸ್, ನಗರಸಭೆ ನಾಮನಿರ್ದೇಶನ ಸದಸ್ಯ ಕೆ.ಬಿ. ರಾಜಶೇಖರ್, ಜಗದೀಶ್ ಚೂರಿ, ದ್ಯಾವನೇಕರ ರೇವಣ್ಣಪ್ಪ, ಶಾವಿಗಿ ಅಣ್ಣಪ್ಪ, ಎಂ. ಚಿದಾನಂದ ಕಂಚಿಕೇರಿ, ರಾಮು, ಸಿಂಗಾಡಿ ಕೃಷ್ಣ, ರವಿಕುಮಾರ್, ಕಿರಣ್ ಭೂತೆ, ಮಂಜುನಾಥ್, ಕೆ.ಬಿ. ಚಂದ್ರಶೇಖರ್, ಮಂಜುಳಾ, ಶೈಲಜಾ ರಾಜಶೇಖರ್, ಮಾನಸ, ಮಮತಾ, ಗುತ್ಯಮ್ಮ, ನೇತ್ರಾವತಿ, ಶೀಲಮ್ಮ, ರತ್ನಮ್ಮ, ದ್ರಾಕ್ಷಾಯಣಮ್ಮ, ಚಂದ್ರಮ್ಮ, ಕವಿತಾ, ಶಕುಂ ತಲಮ್ಮ, ಬೀರಪ್ಪ, ನಾಗರಾಜ್ ಇತರರು ಹಾಜರಿದ್ದರು.