ರೆಡ್ ಕ್ರಾಸ್ ಅರಿವು ಕಾರ್ಯಕ್ರಮದಲ್ಲಿ ಡಾ.ಕುಮಾರ್
ದಾವಣಗೆರೆ, ಮಾ. 18- ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಮಾನಸ ಪ್ಯಾರಾ ಮೆಡಿಕಲ್ ಕಾಲೇಜು, ರಾಜೀವ್ ಗಾಂಧಿ ಪ್ಯಾರಾ ಮೆಡಿಕಲ್ ಕಾಲೇಜು, ಬಿ. ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು, ಎಸ್. ಬಿ. ಸಿ. ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಅಥಣಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಇವರುಗಳ ಸಹಯೋಗದಲ್ಲಿ ಪ್ರಥಮ ಚಿಕಿತ್ಸಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜ್ನಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ರಾಷ್ಟ್ರೀಯ ತರಬೇತುದಾರ ಡಾ. ಕುಮಾರ್ ವಿ. ಎಲ್. ಎಸ್. ಅವರು ತುರ್ತು ಸ್ಥಿತಿಗಳ ನಿರ್ವಹಣೆ ಮತ್ತು ಜೀವ ಉಳಿಸುವ ಪ್ರಥಮ ಚಿಕಿತ್ಸೆ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ, ಪ್ರಥಮ ಚಿಕಿತ್ಸೆ ಅರಿವು ಎಲ್ಲರಿಗೂ ಅಗತ್ಯವಾಗಿದೆ ಎಂದು ತಿಳಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಡಾ. ಎ. ಎಂ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಆನಂದ್ ಜ್ಯೋತಿ, ನಿರ್ದೇಶಕರಾದ ಕುಮಾರ ಎಂ, ಶಿವಾನಂದ್ ಡಿ.ಎನ್, ಶ್ರೀಕಾಂತ್ ಬಗರೆ, ರವಿಕುಮಾರ್ ಎ. ಜೆ, ಎನ್. ಕೆ. ಕೊಟ್ರೇಶ್, ಪನ್ನಾಲಾಲ್ ಬಿ, ಶಿವಕುಮಾರ ಎನ್. ಜಿ, ಕೆ. ಗಿರೀಶ್ ಇತರರು ಇದ್ದರು.
ಎಸ್. ಬಿ. ಸಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಅಥಣಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ದಾವಣಗೆರೆ ಕಾಲೇಜಿನ ಪ್ರಾಂಶುಪಾಲ ಡಾ. ಷಣ್ಮುಖ ಕೆ, ಉಪನ್ಯಾಸಕ ಮಂಜುನಾಥ್ ಕೆ. ಎಂ., ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ. ಗುರು ಎಂ. ಸಿ, ಉಪನ್ಯಾಸಕ ಅಣ್ಣೇಶ್ ಪಿ, ಮಾನಸ ಪ್ಯಾರಾ ಮೆಡಿಕಲ್ ಕಾಲೇಜು ಪ್ರಾಂಶುಪಾಲರಾದ ಲಕ್ಷ್ಮೀ ಬಿ.ಎನ್, ಕಾಲೇಜಿನ ಸಂಯೋಜನಾಧಿಕಾರಿ ಮಹೇಶ್ ಎಂ. ಎನ್, ರಾಜೀವ್ ಗಾಂಧಿ ಪ್ಯಾರಾ ಮೆಡಿಕಲ್ ಕಾಲೇಜು ಸಂಯೋಜನಾಧಿಕಾರಿ ರಮೇಶ್ ಹೆಚ್ ಇತರರು ಉಪಸ್ಥಿತರಿದ್ದರು.