ಜಿ.ಎಂ. ತಾಂತ್ರಿಕ ಕಾಲೇಜ್ `ಟೆಕ್’ ಉತ್ಸವದಲ್ಲಿ ಡಾ.ಬಸವರಾಜಪ್ಪ
ದಾವಣಗೆರೆ, ಮಾ.20- ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಈಚೆಗೆ ‘ಟೆಕ್-ಉತ್ಸವ’ ಹಮ್ಮಿಕೊಳ್ಳಲಾಗಿತ್ತು. ಧಾರವಾಡ ಐಐಟಿ ಮಾಜಿ ರಿಜಿಸ್ಟ್ರಾರ್ ಡಾ. ಬಸವರಾಜಪ್ಪ ಉದ್ಘಾಟಿಸಿದರು.
ಕೇವಲ ಅಂಕಗಳಿಗಿಂತ ಸೃಜನಶೀಲತೆ ಮತ್ತು ಜೀವ ಕಲಿಕೆ ಮುಖ್ಯವಾದದ್ದು ಎಂದು ವಿದ್ಯಾಥಿಗಳಿಗೆ ತಿಳಿಸಿದ ಡಾ.ಬಸವರಾಜಪ್ಪನವರು, ದೈನಂದಿನ ಜ್ಞಾನ ಗಳಿಕೆಯ ಶಕ್ತಿ ಮತ್ತು ರೊಬೋಟ್‌ಗಳ ಅಭಿವೃದ್ಧಿ ಮತ್ತು ಬಳಕೆಯ ಸುತ್ತಲಿನ ನೈತಿಕ ಪರಿಸರಗಳ ಅಗತ್ಯವನ್ನು ಮತ್ತು ಕಲಿಕೆಯ ಮಹತ್ವವನ್ನು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಸಂಜಯ್ ಪಾಂಡೆ ಎಂ. ಬಿ. ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ವಿಯಾಗಲು ಬಗೆ ಬಗೆಯ ತಂತ್ರ ಜ್ಞಾನದ ಕೌಶಲ್ಯಗಳ ಅನುಭವ ಗಳನ್ನು, ವಿವಿಧ ಬಗೆಯ ಉತ್ತೇಜನಕಾರಿ ಚಟು ವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮಹತ್ವದ ಉದ್ದೇಶವಾಗಿರಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಸಂಯೋಜಕ ಡಾ. ಮುದಸ್ಸರ್ ಪಾಷಾ, ರೋಬೊಟಿಕ್ಸ್ ಮತ್ತು ಆಟೊಮೇಷನ್ ವಿಭಾಗದ ಪ್ರಾಧ್ಯಾಪಕ ಡಾ. ಡಿ. ಜಿ. ರಾಜಕುಮಾರ್ ತಿಳಿಸಿದರು.
ಉದ್ಯೋಗ ಮತ್ತು ತರಬೇತಿ ಮುಖ್ಯಸ್ಥ ತೇಜಸ್ವಿ ಕಟ್ಟಿಮನಿ ಮತ್ತು ಇತರರು ಉಪಸ್ಥಿತರಿದ್ದರು.