ದಾವಣಗೆರೆ, ಮಾ. 20- ಇಲ್ಲಿನ ಜೆ. ಇಮಾಂ ನಗರ ಸರ್ಕಲ್ನಲ್ಲಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಸಮಿತಿ ವತಿಯಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸಿಎಎ ವಿರುದ್ಧ ಮೊನ್ನೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಫಯಾಜ್ ಅಹಮದ್, ಇದು ಕೇವಲ ಚುನಾವಣೆ ಗಿಮಿಕ್ ಆಗಿದೆ. ಸುಪ್ರೀಂ ಕೋರ್ಟ್ ಚೀಮಾರಿ ಹಾಕಿದ ನಂತರ ಎಸ್ಬಿಐ ಬಿಡುಗಡೆ ಮಾಡಿದ ಚುನಾವಣಾ ಬಾಂಡ್ನ ವರದಿಯ ಭ್ರಷ್ಟಾಚಾರವನ್ನು ಮರೆಮಾಚಲು ಸಿಎಎ ಎಂಬ ಅಸಂವಿಧಾನಿಕ ಕಾನೂನನ್ನು ಜಾರಿ ಮಾಡಿ ದೇಶವನ್ನು ವಿಭಜನೆ ಮಾಡುವ ಕುತಂತ್ರಕ್ಕೆ ಕೈಹಾಕಿದೆ ಎಂದರು.
ಜಿಲ್ಲಾಧ್ಯಕ್ಷ ಯಾಹಿಯಾ ಮಾತನಾಡಿ, ಸಿಎಎ ಕಾನೂನಿನ ವಿರುದ್ಧ ಹೋರಾಟ ಮುಸ್ಲಿಮರ ಹೋರಾಟವಾಗದೆ. ಇದು ಜನಸಾಮಾನ್ಯರ ಹೋರಾಟ ವಾಗಬೇಕಿದೆ. ಏಕೆಂದರೆ ಬಿಜೆಪಿ ಧರ್ಮಾಧಾರಿತವಾಗಿ ಕಾನೂನುಗಳನ್ನು ರೂಪಿಸಿ ಸಂವಿಧಾನದ ಮೂಲ ಆಶಯಗಳನ್ನು ಬುಡಮೇಲು ಮಾಡುತ್ತಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮೋಹಸಿನ್, ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಅಜರುದ್ದೀನ್, ಜಿಲ್ಲಾ ಕೋಶಾಧಿಕಾರಿ ಎ. ಆರ್. ತಾಹೀರ್, ಅಶ್ರಫ್, ನವೀದ್ ಮತ್ತಿತರರು ಉಪಸ್ಥಿತರಿದ್ದರು.